ಮುಂಬೈ: ವಿರಾಟ್ ಕೊಹ್ಲಿಯನ್ನು ಇತ್ತೀಚೆಗೆ ಸಚಿನ್ ತೆಂಡುಲ್ಕರ್ ಗಿಂತ ಶ್ರೇಷ್ಠರು ಎಂದೆಲ್ಲಾ ಕೆಲವರು ಬಣ್ಣಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲೇ ಸಚಿನ್ ತೆಂಡುಲ್ಕರ್ ರ ಈ ದಾಖಲೆಯನ್ನು ಹಿಂದಿಕ್ಕುವ ಅವಕಾಶ ಕೊಹ್ಲಿಗೆ ಒದಗಿ ಬಂದಿದೆ.
ಸದ್ಯ ಟೆಸ್ಟ್ ಕ್ರಿಕೆಟ್ ನಲ್ಲಿ ಸಚಿನ್ ರಷ್ಟೇ ದ್ವಿಶತಕ ಸಿಡಿಸಿರುವ ಕೊಹ್ಲಿ ಶ್ರೇಯಾಂಕ ಪಟ್ಟಿಯಲ್ಲಿ 875 ಅಂಕ ಪಡೆದಿದ್ದಾರೆ.ಆಸ್ಟ್ರೇಲಿಯಾ ಸರಣಿಯಲ್ಲೂ ಕೊಹ್ಲಿ ಶ್ರೇಷ್ಠ ಪ್ರದರ್ಶನ ನೀಡಿದರೆ ಆಲ್ ಟೈಮ್ ಶ್ರೇಯಾಂಕ ಪಟ್ಟಿಯಲ್ಲಿ ಸ್ಟೀವ್ ವಾ ಮತ್ತು ಆಂಡಿ ಫ್ಲವರ್ ಜತೆ 33 ನೇ ಸ್ಥಾನ ಪಡೆದಿದ್ದಾರೆ.
2013 ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ತೆಂಡುಲ್ಕರ್ ಸದ್ಯಕ್ಕೆ 898 ಅಂಕಗಳೊಂದಿಗೆ 31 ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾ ಸರಣಿಯಲ್ಲಿ ಕೊಹ್ಲಿ ಶ್ರೇಯಾಂಕ ಸುಧಾರಿಸಿದರೆ ತೆಂಡುಲ್ಕರ್ ರನ್ನು ಮೀರಿ ಆಲ್ ಟೈಮ್ ಕ್ರಿಕೆಟಿಗರ ಶ್ರೇಯಾಂಕ ಪಟ್ಟಿಯಲ್ಲಿ ಸ್ಥಾನ ಪಡೆಯಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ