ದಿ ಓವಲ್: ಇಂಗ್ಲೆಂಡ್ ವಿರುದ್ಧ ಇಂದಿನಿಂದ ಆರಂಭವಾಗಲಿರುವ ಐದನೇ ಮತ್ತು ಸರಣಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಹೊಸ ದಾಖಲೆ ಮಾಡುವ ಅವಕಾಶ ಸಿಕ್ಕಿದೆ.
ಈಗಾಗಲೇ ಇಂಗ್ಲೆಂಡ್ ಸರಣಿ ಗೆದ್ದಿರುವುದರಿಂದ ಈ ಪಂದ್ಯವನ್ನು ಭಾರತ ಪ್ರತಿಷ್ಠೆ ಉಳಿಸಿಕೊಳ್ಳಲು ಆಡಬೇಕಿದೆ. ಹಾಗಿದ್ದರೂ ವಿರಾಟ್ ಕೊಹ್ಲಿಗೆ ತಮ್ಮ ಬ್ಯಾಟ್ ಮೂಲಕ ವೆಸ್ಟ್ ಇಂಡೀಸ್ ದೈತ್ಯ ಪ್ರತಿಭೆ ವಿವಿ ರಿಚರ್ಡ್ಸ್ ದಾಖಲೆ ಮುರಿಯುವ ಅವಕಾಶ ಎದುರಾಗಿದೆ.
ಈಗಾಗಲೇ 70 ಪಂದ್ಯಗಳಿಂದ ಕೊಹ್ಲಿ 23 ಶತಕಗಳೊಂದಿಗೆ ಟೆಸ್ಟ್ ಶತಕಧಾರಿಗಳ ಪಟ್ಟಿಯಲ್ಲಿ 25 ನೇ ಸ್ಥಾನದಲ್ಲಿದ್ದಾರೆ. ಸಚಿನ್ ತೆಂಡುಲ್ಕರ್ 51 ಶತಕಗಳೊಂದಿಗೆ ಗರಿಷ್ಠ ಟೆಸ್ಟ್ ಶತಕ ದಾಖಲಿಸಿದವರ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿದ್ದಾರೆ. ಒಂದು ವೇಳೆ ಕೊಹ್ಲಿ ಈ ಪಂದ್ಯದಲ್ಲಿ ಶತಕ ಗಳಿಸಿದರೆ ರಿಚರ್ಡ್ಸ್ ಅವರ 23 ಶತಕಗಳ ದಾಖಲೆ ಹಿಂದಿಕ್ಕಿ ಪಟ್ಟಿಯಲ್ಲಿ 24 ನೇ ಸ್ಥಾನಕ್ಕೇರಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.