ಲಂಡನ್: ಮಹತ್ವದ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ನಾಳೆ ಭಾರತ-ಪಾಕ್ ಎದುರಾಗಲಿದೆ. ಪಾಕ್ ವಿರುದ್ಧ ಗೆಲ್ಲಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಂತ್ರ ಹೆಣೆದಿದ್ದಾರೆ.
ಇದೇ ಟೂರ್ನಿಯಲ್ಲಿ ಭಾರತ ಪಾಕಿಸ್ತಾನವನ್ನು ಹೀನಾಯವಾಗಿ ಸೋಲಿಸಿರಬಹುದು. ಹಾಗಂತ ನಾಳೆಯ ಫಲಿತಾಂಶವೂ ಹಾಗೆಯೇ ಆಗಬೇಕೆಂದೇನಿಲ್ಲ. ಆ ಪಂದ್ಯದ ನಂತರ ಪಾಕಿಸ್ತಾನ ಫಾರ್ಮ್ ಗೆ ಮರಳಿದೆ. ಟೂರ್ನಿಯಲ್ಲಿ ಮೇಲೆದ್ದು ಬಂದ ರೀತಿ ಅಭಿನಂದನಾರ್ಹ.
ಹಾಗಾಗಿ ಹಿಂದಿನ ಪಂದ್ಯಗಳಲ್ಲಿ ನಾವು ಗೆದ್ದ ರೀತಿಯನ್ನೇ ಮನಸ್ಸಲ್ಲಿಟ್ಟುಕೊಂಡು ಬೀಗುತ್ತಾ ಕೂರಲು ಸಾಧ್ಯವಿಲ್ಲ. ನಾಳೆ ಹೇಗೆ ಆಡುತ್ತೇವೆ ಎನ್ನುವುದರ ಮೇಲೆ ಫಲಿತಾಂಶ ನಿಂತಿದೆ ಎಂದು ಕೊಹ್ಲಿ ಹೇಳಿದ್ದಾರೆ.
ನಾಳೆಯ ಪಂದ್ಯದಲ್ಲಿ ಗೆಲ್ಲಬೇಕಾದರೆ ಇದುವರೆಗೆ ಆಡಿದ ರೀತಿಯಲ್ಲೇ ಆಡಿದರೂ ಸಾಕು. ಹಾಗಂತ ಮೈಮರೆಯಬಾರದು. ನೂರು ಪ್ರತಿಶತ ನಾಳಿನ ಪಂದ್ಯಕ್ಕೆ ತಯಾರಾಗಬೇಕು ಎಂದು ಕೊಹ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.