ಬೆಂಗಳೂರು: ಏಕದಿನ ಪಂದ್ಯದಲ್ಲಿ ಅದ್ಭುತ ಲಹರಿಯಲ್ಲಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟಿ20 ಪಂದ್ಯದಲ್ಲಿ ಯಾಕೋ ಮಂಕಾಗಿದ್ದರು. ಅದೇನು ದುರಾದೃಷ್ಟವೋ ಆರಂಭಿಕರಾಗಿ ಕಣಕ್ಕಿಳಿದ ಅವರಿಗೆ ಯಾವ ಪಂದ್ಯದಲ್ಲೂ ನಿರೀಕ್ಷಿತ ಪ್ರದರ್ಶನ ತೋರಲಾಗಲಿಲ್ಲ.
ಹೀಗಾಗಿ ಬೆಂಗಳೂರು ಪಂದ್ಯ ಮುಗಿದ ನಂತರ ಓಪನರ್ ಆಗಿ ಅವರ ಫಾರ್ಮ್ ಕಳಪೆಯಾಗಿರುವ ಬಗ್ಗೆ ಪತ್ರಕರ್ತರೊಬ್ಬರು ಪ್ರಶ್ನಿಸಿದರು. ಇದಕ್ಕೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ ಕೊಹ್ಲಿ “ನಾನು ಐಪಿಎಲ್ ನಲ್ಲೂ ಆರಂಭಿಕನಾಗಿ ಕಣಕ್ಕಿಳಿದು ನಾಲ್ಕು ಶತಕ ಗಳಿಸಿದ್ದೆ. ಆಗ ಯಾರೂ ಮಾತನಾಡಲಿಲ್ಲ. ಈಗ ನಾನು ಎರಡು ಪಂದ್ಯದಲ್ಲಿ ವಿಫಲನಾಗಿದ್ದಕ್ಕೆ ಇಷ್ಟು ಮಾತನಾಡುತ್ತಿದ್ದೀರಾ?
ನಮ್ಮ ತಂಡದಲ್ಲಿ ಇನ್ನೂ 10 ಮಂದಿ ಇದ್ದಾರೆ ಸಾರ್. ಅವರ ಬಗ್ಗೆಯೂ ಆಲೋಚನೆ ಮಾಡಿ. ಎಲ್ಲವನ್ನೂ ನಾನೇ ಮಾಡುತ್ತಿದ್ದರೆ ಉಳಿದವರು ಏನು ಮಾಡಬೇಕು?” ಎಂದು ತಿರುಗೇಟು ನೀಡಿದರು. ನಾನು ಸರಣಿಯಲ್ಲಿ 70 ರನ್ ಗಳಿಸಿದ್ದರೆ ಈ ಪ್ರಶ್ನೆ ಕೇಳುತ್ತಿದ್ದಿರಾ? ಸದ್ಯಕ್ಕೆ ಸರಣಿ ಗೆಲುವಿನ ಖುಷಿ ಅನುಭವಿಸಲು ಬಿಡಿ ಎಂದು ಉತ್ತರಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ