ಕೊಲೊಂಬೊ: ಹಿಂದೆ ಸೌರವ್ ಗಂಗೂಲಿಗೆ 13 ಎಂದರೆ ದುರಾದೃಷ್ಟದ ನಂಬರ್ ಎಂದೇ ನಂಬಲಾಗಿತ್ತು. ಗಂಗೂಲಿ ಇಷ್ಟು ರನ್ ಸ್ಕೋರ್ ಮಾಡಿದರೆಂದರೆ ಅವರ ಅಭಿಮಾನಿಗಳಿಗೆ ಏನೋ ಭಯ!
ತಮ್ಮ ನೆಚ್ಚಿನ ದಾದ 13 ರನ್ ಗೆ ಬಂದು ನಿಂತರೆ ಔಟಾಗುತ್ತಾರೆ ಎಂಬುದೇ ಆ ಭಯ. ಅದೇ 13 ಎಂಬ ನಂಬರ್ ಇದೀಗ ವಿರಾಟ್ ಕೊಹ್ಲಿಯನ್ನು ಕಾಡುತ್ತಿದೆಯಾ?
ನಿನ್ನೆ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ 13 ಕ್ಕೆ ಔಟಾದಾಗ ಸಾಮಾಜಿಕ ಜಾಲತಾಣದಲ್ಲಿ ಇಂತಹದ್ದೊಂದು ಇಂಟರೆಸ್ಟಿಂಗ್ ಚರ್ಚೆ ಶುರುವಾಗಿದೆ. ಇದಕ್ಕೂ ಮೊದಲು ಗುಂಡಪ್ಪ ವಿಶ್ವನಾಥ್, ಸುನಿಲ್ ಗವಾಸ್ಕರ್ ಕೂಡಾ 13 ರನ್ ಗಳಿಗೆ ಎರಡು ಬಾರಿ ಔಟಾಗಿ ಇದೊಂದು ಅನ್ ಲಕ್ಕೀ ನಂಬರ್ ಎಂದು ಪ್ರೂವ್ ಮಾಡಿದ್ದರು. ಇದೀಗ ಕೊಹ್ಲಿಯೂ 13 ಕ್ಕೆ ಔಟಾಗಿದ್ದರಿಂದ ಆ ಚರ್ಚೆ ಮತ್ತೆ ಶುರುವಾಗಿದೆ.