ಚೆನ್ನೈ: ಟೀಂ ಇಂಡಿಯಾ ಆಡುವ ಬಳಗ ಆಯ್ಕೆ ವಿಚಾರದಲ್ಲಿ ಪದೇ ಪದೇ ನಾಯಕ ವಿರಾಟ್ ಕೊಹ್ಲಿ ಟೀಕೆಗೆ ಗುರಿಯಾಗುತ್ತಲೇ ಇದ್ದಾರೆ. ಅದೀಗ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಮುಂದುವರಿದಿದೆ.
ಸರಿಯಾದ ತಂಡವನ್ನು ಆಯ್ಕೆಮಾಡುವಲ್ಲಿ ಕೊಹ್ಲಿ ಪದೇ ಪದೇ ಸೋಲುತ್ತಾರೆ. ಅನಿರೀಕ್ಷಿತವಾಗಿ ಮಾಡುವ ಬದಲಾವಣೆಗಳು, ಅರ್ಹ ಆಟಗಾರರನ್ನು ಮೂಲೆಗುಂಪು ಮಾಡುವುದು, ಅನರ್ಹರಾದವರನ್ನು ಆಯ್ಕೆ ಮಾಡುವುದು ಇತ್ಯಾದಿ ವಿಚಾರಕ್ಕೆ ಅವರ ನಾಯಕತ್ವದ ಬಗ್ಗೆ ಪ್ರಶ್ನೆ ಮೂಡುತ್ತಿರುತ್ತದೆ. ಇದೀಗ ಕಳೆದ ಪಂದ್ಯದಲ್ಲಿ ಭಾರತಕ್ಕೆ ಅಗ್ರ ಪಂಕ್ತಿಯ ಆಟಗಾರರು ಕೈಕೊಟ್ಟಾಗ ಆಸರೆಯಾಗಿದ್ದ ವಾಷಿಂಗ್ಟನ್ ಸುಂದರ್ ರನ್ನೇ ಹೊರಗಿಟ್ಟು ಅಕ್ಸರ್ ಪಟೇಲ್ ರನ್ನು ಆಯ್ಕೆ ಮಾಡಿದ್ದಕ್ಕೆ ಕೊಹ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಇದೂ ಸಾಲದೆಂಬಂತೆ ಯುವ ವೇಗಿ ಮೊಹಮ್ಮದ್ ಸಿರಾಜ್ ಗಾಗಿ ಜಸ್ಪ್ರೀತ್ ಬುಮ್ರಾಗೆ ಈ ನಿರ್ಣಾಯಕ ಪಂದ್ಯಕ್ಕೆ ರೆಸ್ಟ್ ನೀಡುವ ಅಗತ್ಯವಿತ್ತೇ? ಇಂತಹ ಕೆಲವು ಅಸಂಬದ್ಧ ನಿರ್ಧಾರಗಳು ತಂಡಕ್ಕೆ ದುಬಾರಿಯಾಗಿ ಪರಿಣಮಿಸುತ್ತಿದೆ.