Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಚಿನ್ ತೆಂಡುಲ್ಕರ್ ದಾಖಲೆ ಮುರಿದ ವಿರಾಟ್ ಕೊಹ್ಲಿ

ಸಚಿನ್ ತೆಂಡುಲ್ಕರ್ ದಾಖಲೆ ಮುರಿದ ವಿರಾಟ್ ಕೊಹ್ಲಿ
Pune , ಸೋಮವಾರ, 16 ಜನವರಿ 2017 (09:23 IST)
ಪುಣೆ: ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಸಚಿನ್ ತೆಂಡುಲ್ಕರ್ ದಾಖಲೆಯೊಂದನ್ನು ಮುರಿದಿದ್ದಾರೆ. ರನ್ ಚೇಸಿಂಗ್ ಸಂದರ್ಭ ಅತೀ ಹೆಚ್ಚು ಶತಕ ಗಳಿಸಿದ ದಾಖಲೆ ಈಗ ಕೊಹ್ಲಿ ಹೆಸರಲ್ಲಿದೆ. ಈ ಪಂದ್ಯದಲ್ಲಿ ವಿನೂತನವಾಗಿ ಬರೆದ ಇತರ ದಾಖಲೆಗಳು ಯಾವುದೆಲ್ಲಾ ನೋಡೋಣ.


ರನ್ ಚೇಸ್ ಮಾಡುವಾಗ ಸಚಿನ್ 17 ಶತಕದ ವಿಶ್ವ ದಾಖಲೆ ಮಾಡಿದ್ದರು. ಇದು ಈವರೆಗಿನ ಗರಿಷ್ಠವಾಗಿತ್ತು. ಕೊಹ್ಲಿ  ಈ ದಾಖಲೆಯನ್ನು ಸರಿಗಟ್ಟಿದ್ದಾರೆ. ಆದರೆ ತೆಂಡುಲ್ಕರ್ 17 ಶತಕ ಗಳಿಸಲು 232 ಇನಿಂಗ್ಸ್ ಬೇಕಾಯಿತು. ಆದರೆ ಕೊಹ್ಲಿ ಕೇವಲ 96 ಇನಿಂಗ್ಸ್ ಗಳಿಂದ ಈ ಸಾಧನೆ ಮಾಡಿದ್ದಾರೆ. ಅಲ್ಲದೆ ನಾಯಕನಾಗಿ ಅತೀ ಕಡಿಮೆ ಇನಿಂಗ್ಸ್ ಗಳಲ್ಲಿ ಐದು ಶತಕ ದಾಖಲಿಸಿದ ಸಾಧನೆ ಮಾಡಿದರು. ಕೇವಲ 169 ಇನಿಂಗ್ಸ್ ಗಳಿಂದ 27 ಶತಕ ಸಿಡಿಸಿ ಅತೀ ಕಡಿಮೆ ಇನಿಂಗ್ಸ್ ಗಳಿಂದ ಗರಿಷ್ಠ ಶತಕ ಗಳಿಸಿದ ವಿಶ್ವದಾಖಲೆಗೂ ಕೊಹ್ಲಿ ಪಾತ್ರಾದರು.

ಇಂಗ್ಲೆಂಡ್ ಭಾರತದ ವಿರುದ್ಧ ಗಳಿಸಿದ ಗರಿಷ್ಠ ಟೋಟಲ್ 350 ಆಗಿದೆ. ಈ ಹಿಂದೆ ಬೆಂಗಳೂರಿನಲ್ಲಿ 338 ರನ್ ಗಳಿಸಿದ್ದೇ ಅತೀಹೆಚ್ಚಾಗಿತ್ತು. ಭಾರತ ಯಶಸ್ವಿಯಾಗಿ ರನ್ ಚೇಸ್ ಮಾಡಿದ ಎರಡನೇ ಗರಿಷ್ಠ ಮೊತ್ತ ಇದಾಗಿದೆ.

ಇಶಾಂತ್ ಶರ್ಮಾ ನಂತರ ಭಾರತೀಯ ಬೌಲರ್ ಗಳ ಪೈಕಿ ಒಂದು ಪಂದ್ಯದಲ್ಲಿ 10 ಓವರ್ ಗಳಲ್ಲಿ ಅತೀ ಹೆಚ್ಚು (79) ರನ್ ನೀಡಿದ ಕುಖ್ಯಾತಿಗೆ ಜಸ್ಪ್ರೀತ್ ಬುಮ್ರಾ ಪಾತ್ರರಾದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ವಿರಾಟ’ ಪರ್ವದ ಮೊದಲ ಅಧ್ಯಾಯವನ್ನೇ ಅದ್ಭುತವಾಗಿ ಬರೆದ ಕೊಹ್ಲಿ