ಲಂಡನ್: ಪ್ರಮುಖ ಟೂರ್ನಿಗೆ ತಯಾರಾಗುತ್ತಿರುವ ಭಾರತ ತಂಡ ಕೊಂಚ ರಿಲ್ಯಾಕ್ಸ್ ಆಗಲು ತಮ್ಮ ಜತೆ ತೆರಳಿದ್ದ ಪತ್ನಿಯರ ಜತೆ ಲಂಚ್ ಬ್ರೇಕ್ ತೆಗೆದುಕೊಂಡರು.
ಚಾಂಪಿಯನ್ಸ್ ಟ್ರೋಫಿಗಾಗಿ ಕುಟುಂಬ ಸಮೇತ ಇಂಗ್ಲೆಂಡ್ ಗೆ ತೆರಳಿದ ಟೀಂ ಇಂಡಿಯಾದ ಆಟಗಾರರಲ್ಲಿ ಉಮೇಶ್ ಯಾದವ್, ಶಿಖರ್ ಧವನ್ ಸೇರಿದ್ದಾರೆ. ಬಿಡುವಿಲ್ಲದ ವೇಳಾಪಟ್ಟಿಯ ನಡುವೆ ಕುಟುಂಬಕ್ಕಾಗಿ ಕೊಂಚ ಸಮಯ ಮೀಸಲಿಟ್ಟಿದ್ದಾರೆ.
ಆ ಸಮಯದಲ್ಲಿ ಪತ್ನಿ ಜತೆ ಊಟ ಮಾಡಿ ಆ ಫೋಟೋಗಳನ್ನು ತಮ್ಮ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಪ್ರಕಟಿಸಿ ಖುಷಿ ಹಂಚಿಕೊಂಡಿದ್ದಾರೆ. ಕುಟುಂಬದ ಜತೆಗೆ ಅಭಿಮಾನಿಗಳ ಜತೆಗೂ ಕ್ರಿಕೆಟಿಗರು ಕೆಲ ಕಾಲ ಕಳೆದಿದ್ದಾರೆ.
ಎಡ್ಜ್ ಬಾಸ್ಟನ್ ನಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ತಮ್ಮನ್ನು ನೋಡಲು ಬಂದ ಅಭಿಮಾನಿಗಳಿಗೆ ಸೆಲ್ಫೀ ತೆಗೆಯಲು ಅವಕಾಶ ನೀಡಿದ ಆಟಗಾರರು, ಹಸ್ತಾಕ್ಷರ ನೀಡಿ ಸಂತಸ ನೀಡಿದರು.