Webdunia - Bharat's app for daily news and videos

Install App

ಸುನಿಲ್ ಗಾವಸ್ಕರ್‌ಗೆ ಫ್ಲೋರಿಡಾ ಕ್ರೀಡಾಂಗಣ ಪ್ರವೇಶ ನಿರಾಕರಣೆ

Webdunia
ಮಂಗಳವಾರ, 30 ಆಗಸ್ಟ್ 2016 (15:32 IST)
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸುನಿಲ್ ಗಾವಸ್ಕರ್ ಅವರಿಗೆ ಕ್ರಿಕೆಟ್ ಲೋಕದಲ್ಲಿ ಬಹಳ ಮನ್ನಣೆ ಇದೆ. ಆದರೆ ಕ್ರಿಕೆಟ್ ಇನ್ನು ಅಂಬೆಗಾಲಿಕ್ಕುತ್ತಿರುವ ಅಮೇರಿಕಾದಲ್ಲಿ ಅವರಿಗೆ ಬಹಳ ನೋವನ್ನುಂಟು ಮಾಡುವ ಅನುಭವವಾಗಿದೆ. 

ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ನಡೆದ ಅಂತಿಮ ಟಿ20 ಪಂದ್ಯವನ್ನು ವೀಕ್ಷಿಸಲು ಫ್ಲೋರಿಡಾಗೆ ಬಂದಿದ್ದ ಅವರಿಗೆ ಕ್ರೀಡಾಂಗಣ ಪ್ರವೇಶವನ್ನು ನಿರಾಕರಿಸಲಾಗಿದೆ. 
 
ಅಮೇರಿಕಾದಲ್ಲಿ ಕ್ರಿಕೆಟ್‌ನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ವೆಸ್ಟ್ ಇಂಡೀಸ್ ಮತ್ತು ಭಾರತದ ನಡುವೆ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಆದರೆ ಪಂದ್ಯಾವಳಿಯ ಎರಡನೆಯ ಪಂದ್ಯವನ್ನು ವೀಕ್ಷಿಸಲು ಬಂದ ಕ್ರಿಕೆಟ್ ದಂತಕಥೆ ಗವಾಸ್ಕರ್ ಅವರನ್ನು ಗುರುತಿಸದ ರಕ್ಷಣಾ ಸಿಬ್ಬಂದಿ ಪ್ರವೇಶವನ್ನು ನಿರಾಕರಿಸಿದ್ದಾರೆ. 
 
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸುವವರ ಸಾಲಿನಲ್ಲಿ ಗುರುತಿಸಿಕೊಳ್ಳುವ ಲಿಟ್ಟಲ್ ಮಾಸ್ಟರ್, ಅಧಿಕೃತ ವೀಕ್ಷಕಕ ವಿವರಣೆಕಾರ ಗವಾಸ್ಕರ್ ಅವರಿಗಾದ ಈ ಅಪಮಾನಕ್ಕೆ ಭಾರಿ ಖಂಡನೆ ವ್ಯಕ್ತವಾಗಿದೆ. 
 
ಅಮೇರಿಕಾದಲ್ಲಿ ಬಿಗಿಯಾದ ರಕ್ಷಣಾ ವ್ಯವಸ್ಥೆ ಇದ್ದು, ಅದರಲ್ಲೂ ಸಾರ್ವಜನಿಕ ಸ್ಥಳಗಳಾದ ವಿಮಾನ ನಿಲ್ದಾಣ, ಕ್ರೀಡಾಂಗಣಕ್ಕೆ ಹೆಚ್ಚಿನ ಭದ್ರತೆಯನ್ನು ಕಲ್ಪಿಸಲಾಗುತ್ತದೆ. ವಿಶ್ವವಿಖ್ಯಾತ ಚಲನಚಿತ್ರ ನಟ, ಸೂಪರ್ ಸ್ಟಾರ್ ಶಾರುಖ್ ಅವರಿಗೂ ಇತ್ತೀಚಿಗೆ ಲಾಂಜ್ ಏಂಜಲೀಸ್ ವಿಮಾನ ನಿಲ್ದಾಣದಲ್ಲಿ ಇಂತದಹೇ ಕೆಟ್ಟ ಅನುಭವವಾಗಿತ್ತು.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments