ನವದೆಹಲಿ: ಕ್ರಿಕೆಟಿಗ ಧೋನಿಗಾಗಿ ತಾವು ನಾಯಕರಾಗಿದ್ದಾಗ ಸೌರವ್ ಗಂಗೂಲಿ ತಮ್ಮ ಕೆರೆಯರ್ ನ್ನೇ ತ್ಯಾಗ ಮಾಡಿದ್ದರು ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿಕೊಂಡಿದ್ದಾರೆ.
ಧೋನಿ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದು ಗಂಗೂಲಿ ನಾಯಕತ್ವದಲ್ಲಿ. ಗಂಗೂಲಿ ಯಾವತ್ತೂ ಯುವ ಕ್ರಿಕೆಟಿಗರಿಗೆ ಹೆಚ್ಚು ಅವಕಾಶ, ಪ್ರೋತ್ಸಾಹ ಕೊಡುತ್ತಿದ್ದರು. ಧೋನಿ ವಿಚಾರದಲ್ಲು ಹಾಗೆಯೇ ಆಯಿತು.
ಧೋನಿಗಾಗಿ ತಮ್ಮ ಬ್ಯಾಟಿಂಗ್ ಕ್ರಮಾಂಕವನ್ನೇ ಗಂಗೂಲಿ ತ್ಯಾಗ ಮಾಡದೇ ಹೋಗಿದ್ದರೆ ಧೋನಿ ಇಂದು ಈ ಸ್ಥಾನದಲ್ಲಿರುತ್ತಿರಲಿಲ್ಲ ಎಂದು ಸೆಹ್ವಾಗ್ ಹೇಳಿದ್ದಾರೆ. ಆರಂಭದಲ್ಲಿ ಕೊನೆಯ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬರುತ್ತಿದ್ದ ಧೋನಿ ಹೆಚ್ಚು ಯಶಸ್ಸು ಕಂಡಿರಲಿಲ್ಲ.
‘ಒಮ್ಮೆ ನಾವು ಬ್ಯಾಟಿಂಗ್ ಕ್ರಮಾಂಕದಲ್ಲಿ ಪ್ರಯೋಗ ನಡೆಸುತ್ತಿದ್ದೆವು. ಆ ಸಂದರ್ಭದಲ್ಲಿ ಒಂದು ವೇಳೆ ನಮಗೆ ಉತ್ತಮ ಆರಂಭ ದೊರಕಿದರೆ ಗಂಗೂಲಿ ಮೂರನೇ ಕ್ರಮಾಂಕದಲ್ಲಿ ಬರುವುದು ಇಲ್ಲದಿದ್ದರೆ ಪಿಂಚ್ ಹಿಟ್ಟರ್ ಗಳಾದ ಇರ್ಫಾನ್ ಪಠಾಣ್ ಅಥವಾ ಧೋನಿಯನ್ನು ಬ್ಯಾಟಿಂಗ್ ಗೆ ಇಳಿಸೋಣ ಎಂದು ನಿರ್ಧರಿಸಿದ್ದೆವು. ಅದೇ ರೀತಿ ಗಂಗೂಲಿ ತಮ್ಮ 3 ನೇ ಕ್ರಮಾಂಕವನ್ನು ಧೋನಿಗೆ ಬಿಟ್ಟುಕೊಟ್ಟರು. ಹಾಗಾಗಿಯೇ ಧೋನಿ ಕ್ಲಿಕ್ ಆದರು’ ಎಂದು ಸಂದರ್ಶನವೊಂದರಲ್ಲಿ ಸೆಹ್ವಾಗ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ