ಲಂಡನ್: ಚೊಚ್ಚಲ ವಿಶ್ವಕಪ್ ಕಿರೀಟ ಮುಡಿಗೇರಿಸುವ ಉತ್ಸಾಹದಲ್ಲಿರುವ ಟೀಂ ಇಂಡಿಯಾ ಮಹಿಳಾ ತಂಡಕ್ಕೆ ಸೆಮಿಫೈನಲ್ ಹೀರೋಯಿನ್ ಹರ್ಮನ್ ಪ್ರೀತ್ ಕೌರ್ ಗಾಯಗೊಂಡಿರುವುದು ಆಘಾತ ಮೂಡಿಸಿದೆ.
ನಿನ್ನೆ ಅಭ್ಯಾಸ ಸಮಯದಲ್ಲಿ ಭುಜಕ್ಕೆ ಗಾಯ ಮಾಡಿಕೊಂಡ ಹರ್ಮನ್ ಪ್ರೀತ್ ಗೆ ತಕ್ಷಣ ಫಿಸಿಯೋ ಶುಶ್ರೂಷೆ ನೀಡಿದರು. ಅವರ ಅವರ ಗಾಯ ಗಂಭೀರವಾಗಿದೆಯೇ ಅಥವಾ ಇಂದಿನ ಪಂದ್ಯಕ್ಕೆ ಅವರು ಲಭ್ಯರಾಗುತ್ತಾರೆಯೇ ಎಂಬ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.
ಆದರೆ ನಾಯಕಿ ಮಿಥಾಲಿ ರಾಜ್ ಹರ್ಮನ್ ಪ್ರಮುಖ ಪಂದ್ಯಕ್ಕೆ ಮೊದಲು ಫಿಟ್ ಆಗುತ್ತಾರೆಂಬ ವಿಶ್ವಾಸದಲ್ಲಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲೂ ಭರ್ಜರಿ ಇನಿಂಗ್ಸ್ ಆಡಿದ್ದ ಹರ್ಮನ್ ಮಧ್ಯದಲ್ಲಿ ತೀವ್ರ ಬಳಲಿದಂತಿದ್ದರು. ಹಾಗಿದ್ದರೂ ನಾಟೌಟ್ ಆಗಿ ಇನಿಂಗ್ಸ್ ಮುಗಿಸಿದ್ದರು. ಇಂದಿನ ಫೈನಲ್ ಪಂದ್ಯ ಗೆಲ್ಲಬೇಕಾದರೆ ಮತ್ತೊಮ್ಮೆ ಅವರ ಬ್ಯಾಟ್ ನಿಂದ ಅಂತಹ ಮತ್ತೊಂದು ಇನಿಂಗ್ಸ್ ಬರಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ