ವಿಶಾಖಪಟ್ಟಣ: 2019 ರ ಸಾಲಿನಲ್ಲಿ ಏಕದಿನ ಪಂದ್ಯಗಳಿಂದ ಅತೀ ಹೆಚ್ಚು ವೈಯಕ್ತಿಕ ರನ್ ಗಳಿಸಿದ ಕ್ರಿಕೆಟಿಗ ಎನಿಸಿಕೊಳ್ಳಲು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಪೈಪೋಟಿ ಏರ್ಪಟ್ಟಿದೆ. ಇದರ ನಡುವೆ ಈ ರೇಸ್ ಗೆ ವಿಂಡೀಸ್ ಕ್ರಿಕೆಟಿಗ ಶೈ ಹೋಪ್ ಕೂಡಾ ಸೇರಿಕೊಂಡಿದ್ದಾರೆ.
ಈ ವರ್ಷ ಏಕದಿನ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 1292 ರನ್ ಗಳಿಸಿದ್ದರೆ ರೋಹಿತ್ ಶರ್ಮಾ 1268 ರನ್ ಗಳಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಈ ರೇಸ್ ನಲ್ಲಿ ಅಗ್ರ ಸ್ಥಾನ ಪಡೆಯಲು ಇಬ್ಬರಿಗೂ ಇನ್ನು ಎರಡು ಪಂದ್ಯಗಳ ಅವಕಾಶವಿದೆ.
ಆದರೆ ಇವರಿಬ್ಬರು ಒಂದೆಡೆ ರೇಸ್ ಮಾಡುತ್ತಿದ್ದರೆ, ಸದ್ದಿಲ್ಲದೇ ವಿಂಡೀಸ್ ಕ್ರಿಕೆಟಿಗ ಶೈ ಹೋಪ್ ಕೂಡಾ ಕಣಕ್ಕಿಳಿದಿದ್ದಾರೆ. ಶೈ ಹೋಪ್ ಈ ವರ್ಷ 1225 ರನ್ ಗಳಿಸಿದ್ದಾರೆ. ಹೀಗಾಗಿ ಈಗ ಎರಡು ಪಂದ್ಯಗಳಿಂದ ಮೂವರೂ ಕ್ರಿಕೆಟಿಗರೂ ರನ್ ಗಳಿಸುವ ರೇಸ್ ನಲ್ಲಿದ್ದು ಯಾರು ಮೊದಲ ಸ್ಥಾನ ಪಡೆಯುತ್ತಾರೆ ಎಂದು ಕಾದು ನೋಡಬೇಕಿದೆ.