ಮೆಲ್ಬೋರ್ನ್: ವಿರಾಟ್ ಕೊಹ್ಲಿಯ ಆಕ್ರಮಣಕಾರಿ ಸ್ವಭಾವದ ಬಗ್ಗೆ ಚರ್ಚೆಗಳಾಗುತ್ತಿರುವ ಬೆನ್ನಲ್ಲೇ ಇಂಥಾ ಆಟಗಾರನೊಬ್ಬ ಈ ಭೂಮಿಯ ಮೇಲೆಯೇ ಇಲ್ಲ ಎಂದು ಮಾಜಿ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಹೊಗಳಿದ್ದಾರೆ.
‘ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಈ ಟೆಸ್ಟ್ ಸರಣಿ ಎರಡು ಶ್ರೇಷ್ಠ ತಂಡಗಳ ನಡುವೆ ನಡೆಯುತ್ತಿದೆ. ಅದಕ್ಕೆ ಕಾರಣ ಈ ಭೂಮಿಯ ಮೇಲೆ ಇರುವ ಏಕೈಕ ಶ್ರೇಷ್ಠ ಆಟಗಾರ ಕೊಹ್ಲಿ ಮತ್ತು ಆಸೀಸ್ ನಾಯಕ ಟಿಮ್ ಪೇಯ್ನ್’ ಎಂದು ವಾರ್ನ್ ಹೊಗಳಿದ್ದಾರೆ.
ಇದೇ ಮೈದಾನದಲ್ಲಿ ವಾರ್ನ್ ತಮ್ಮ ವೃತ್ತಿ ಜೀವನದ 700 ನೇ ಟೆಸ್ಟ್ ವಿಕೆಟ್ ಕಬಳಿಸಿದ್ದರು. ಹೀಗಾಗಿ ತಮಗೆ ವೈಯಕ್ತಿಕವಾಗಿಯೂ ಮೆಲ್ಬೋರ್ನ್ ಅಂಗಣ ವಿಶೇಷವಾಗಿದೆ ಎಂದು ವಾರ್ನ್ ಹೇಳಿಕೊಂಡಿದ್ದಾರೆ. ಉಭಯ ತಂಡಗಳೂ ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿದ್ದು, ಈ ಪಂದ್ಯದಲ್ಲಿ ಯಾರ ಕೈ ಮೇಲಾಗಲಿದೆ ಎಂದು ನೋಡಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ