ಕರಾಚಿ: ಬೌಲರ್ ಗಳು ಅಂಪಾಯರ್ ಗಳಿಗೆ ಅಪೀಲು ಮಾಡುವುದು ಸಾಮಾನ್ಯ. ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರಿದಿ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಅಪೀಲು ಮಾಡಿದ್ದಾರೆ. ಏನಂತ ಎಂದು ತಿಳಿಯಲು ಈ ಸುದ್ದಿ ಓದಿ.
ಅಸ್ಸಾಂನಲ್ಲಿ ಕ್ರಿಕೆಟ್ ಪಂದ್ಯವೊಂದು ನಡೆಯುತ್ತಿದ್ದಾಗ ಅಭಿಮಾನಿಯೊಬ್ಬ ಅಪ್ರಿದಿ ತೊಡುವ ಜೆರ್ಸಿಯಂತಹದ್ದೇ ಬಣ್ಣ ಮತ್ತು ಸಂಖ್ಯೆಯ ಜೆರ್ಸಿ ತೊಟ್ಟು ಕುಳಿತಿದ್ದ. ಆತನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಅಸ್ಸಾಂನಲ್ಲಿ ಬಿಜೆಪಿ ಸರ್ಕಾರವಿದೆ ಎನ್ನುವದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಿ.
ಈಗ ಆ ಅಭಿಮಾನಿಯ ಬಿಡುಗಡೆಗೆ ಅಫ್ರಿದಿ ಮೋದಿಗೆ ಮನವಿ ಮಾಡಿದ್ದಾರೆ. ಅಲ್ಲದೆ ಇಂತಹ ಸಿಲ್ಲಿ ಕಾರಣಕ್ಕೆ ತನ್ನ ಅಭಿಮಾನಿಯನ್ನು ಬಂಧಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇಂತಹ ಅಸಹಿಷ್ಣುತೆಯನ್ನು ಸಹಿಸಲಾಗದು. ಕ್ರಿಕೆಟ್ ಜತೆಗೆ ರಾಜಕೀಯ ಬೆರೆಸಬೇಡಿ. ಆ ದೇಶದಲ್ಲೂ ಪಾಕಿಸ್ತಾನ ಕ್ರಿಕೆಟಿಗರನ್ನು ಇಷ್ಟಪಡುವವರು ಇದ್ದರೆ, ಈ ದೇಶದಲ್ಲೂ ಭಾರತೀಯ ಕ್ರಿಕೆಟಿಗರ ಅಭಿಮಾನಿಗಳಿದ್ದಾರೆ. ಅದು ತಪ್ಪೇ?” ಎಂದು ಪ್ರಶ್ನಿಸಿದ್ದಾರೆ.
ಇಂತಿಪ್ಪ ಅಫ್ರಿದಿ ಸಾಹೇಬರು, ಕೆಲವು ತಿಂಗಳುಗಳ ಹಿಂದೆ ಪಾಕ್ ಅಧಿಕಾರಿಗಳು ವಿರಾಟ್ ಕೊಹ್ಲಿ ಅಭಿಮಾನಿ ಎಂದಿದ್ದಕ್ಕೆ ಅಭಿಮಾನಿಯೊಬ್ಬನನ್ನು ಬಂಧಿಸಿದ್ದು ಯಾಕೆ ಎಂದು ಪ್ರಶ್ನಿಸುವ ಧೈರ್ಯ ಮಾಡಲಿಲ್ಲ ಯಾಕೋ?!
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ