ಕಟಕ್: ದ್ವಿತೀಯ ಏಕದಿನ ಪಂದ್ಯದಲ್ಲಿ ತಮ್ಮ ವೃತ್ತಿ ಜೀವನದ 14 ನೇ ಶತಕ ದಾಖಲಿಸಿದ ಬಳಿಕ ಆ ಸಂಭ್ರಮವನ್ನು ಯುವರಾಜ್ ಸಿಂಗ್ ಹೇಗೆ ಆಚರಿಸಿಕೊಂಡರು ಗೊತ್ತೇ? ಪತ್ನಿ ಜತೆ ಪಾರ್ಟಿ ಮಾಡಿದರು ಅಂದುಕೊಳ್ಳಬೇಡಿ. ಅದಕ್ಕಿಂತಲೂ ವಿಶಿಷ್ಟವಾಗಿ ಆಚರಿಸಿಕೊಂಡರು.
ಕಟಕ್ ನಲ್ಲಿರುವ ಕ್ಯಾನ್ಸರ್ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿದ ಯುವಿ ಅಲ್ಲಿನ ರೋಗಿಗಳೊಂದಿಗೆ ಕೆಲ ಕಾಲ ಕಳೆದರು. ತಮ್ಮ ತಂಡದೊಂದಿಗೆ ಮುಂದಿನ ಪಂದ್ಯಕ್ಕಾಗಿ ಕೋಲ್ಕೊತ್ತಾಗೆ ತೆರಳುವ ಮೊದಲು ಯುವಿ ಕ್ಯಾನ್ಸರ್ ರೋಗಿಗಳ ಜತೆ ತಮ್ಮ ಸಂತಸ ಹಂಚಿಕೊಂಡರು.
ಹಿಂದೊಮ್ಮೆ ಸ್ವತಃ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದ ಯುವಿ ಆಗಾಗ ಇಂತಹ ಸಮಾಜಮುಖಿ ಕೆಲಸಗಳಿಂದ ಗಮನ ಸೆಳೆಯುತ್ತಾರೆ. ಕ್ಯಾನ್ಸರ್ ನಿಂದ ಗುಣಮುಖರಾದ ಮೇಲೆ ಯುವಿ ಕ್ಯಾನ್ ಎಂಬ ಕ್ಯಾನ್ಸರ್ ರೋಗಿಗಳಿಗೆ ಸಹಾಯ ಮಾಡುವ ಫೌಂಡೇಷನ್ ಸ್ಥಾಪಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ