ರಾಂಚಿ: ಸಾಮಾನ್ಯವಾಗಿ ಕ್ರಿಕೆಟಿಗರು ತಮ್ಮ ಕುಟುಂಬದ ಜತೆ ಕಾಲ ಕಳೆಯುವುದೇ ಅಪರೂಪ. ಹಾಗಾಗಿ ತಮ್ಮ ವೃತ್ತಿ ಜೀವನದ ಪ್ರಮುಖ ಘಟ್ಟಗಳಲ್ಲಿ ಕುಟುಂಬದವರ ಸಲಹೆ ಪಡೆದೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಧೋನಿ ವಿಚಾರದಲ್ಲೂ ಅದೇ ಆಗಿದೆ.
ಪತಿ ಧೋನಿ ನಾಯಕತ್ವಕ್ಕೆ ರಾಜೀನಾಮೆ ನೀಡಿರುವ ಬಗ್ಗೆ ಪತ್ನಿ ಸಾಕ್ಷಿ ಸಿಂಗ್ ಟ್ವೀಟ್ ಮಾಡಿದ್ದಾರೆ. ಸದಾ ಟ್ವಿಟರ್ ನಲ್ಲಿ ಕ್ರಿಯಾಶೀಲರಾಗಿರುವ ಸಾಕ್ಷಿ ತಮ್ಮ ಪತಿಯ ನಿರ್ಧಾರಕ್ಕೆ ತಮ್ಮ ಬೆಂಬಲವಿರುವುದನ್ನು ಈ ಮೂಲಕ ಸೂಚಿಸಿದ್ದಾರೆ.
“ನಿಮಗಿನ್ನು ಏರಲು ಯಾವುದೇ ಎತ್ತರ ಉಳಿದಿಲ್ಲ. ನಿಮ್ಮ ಬಗ್ಗೆ ಹೆಮ್ಮೆಯಿದೆ” ಎಂದು ಸಾಕ್ಷಿ ಪತಿಯನ್ನು ಬೆಂಬಲಿಸಿ ಪ್ರೀತಿಯಿಂದ ಟ್ವೀಟ್ ಮಾಡಿದ್ದಾರೆ. ಧೋನಿ ಟ್ವಿಟರ್ ಬಳಸುವುದಿಲ್ಲ. ಪತ್ನಿ ಸಾಕ್ಷಿಯೇ ಟ್ವಿಟರ್ ಮೂಲಕ ಕೆಲವೊಮ್ಮೆ ಧೋನಿ ಖಾಸಗಿ ಜೀವನವನ್ನು ತೆರೆದಿಡುತ್ತಾರೆ. ಇದೀಗ ವಿದಾಯದ ವಿಚಾರದಲ್ಲೂ ಪತಿಯ ನಿರ್ಧಾರದ ಬಗ್ಗೆ ಸಾಕ್ಷಿ ಟ್ವೀಟ್ ಮಾಡಿರುವುದಕ್ಕೆ ಸಾಕಷ್ಟು ಲೈಕ್ಸ್ ಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ