ಮುಂಬೈ: ಟೀಂ ಇಂಡಿಯಾ 2015 ವಿಶ್ವಕಪ್ ಕ್ರಿಕೆಟ್ ಆಡಲು ಆಸ್ಟ್ರೇಲಿಯಾದಲ್ಲಿ ಬೀಡು ಬಿಟ್ಟಿದ್ದಾಗ ಧೋನಿ ಪತ್ನಿ ಸಾಕ್ಷಿ ಸಿಂಗ್ ಹೆಣ್ಣು ಮಗುವಿಗೆ ಜನ್ಮವಿತ್ತಿದ್ದರು. ಆದರೆ ಈ ವಿಚಾರವನ್ನು ಧೋನಿಗೆ ತಿಳಿಸಲು ಸಾಕ್ಷಿ ಎಷ್ಟು ಕಷ್ಟಪಟ್ಟಿದ್ದರು ಗೊತ್ತಾ?
ಧೋನಿ ವಿಶ್ವಕಪ್ ಅಭ್ಯಾಸ ಪಂದ್ಯವೊಂದನ್ನು ಆಡುತ್ತಿದ್ದಾಗ ಸಾಕ್ಷಿ ಹೆಣ್ಣು ಮಗುವಿಗೆ ಜನ್ಮವಿತ್ತಿದ್ದರು. ಆದರೆ ರಗಳೆ ಬೇಡ ಎಂದು ಧೋನಿ ಮೊಬೈಲ್ ಜತೆಗೆ ಒಯ್ದಿರಲಿಲ್ಲ.
ಹೀಗಾಗಿ ಅಪ್ಪನಾದ ವಿಚಾರ ತಿಳಿಸಲು ಸಾಕ್ಷಿ ಕಷ್ಟಪಡಬೇಕಾಯಿತಂತೆ. ಕೊನೆಗೆ ಸಹ ಆಟಗಾರ ಸುರೇಶ್ ರೈನಾರನ್ನು ಸಂಪರ್ಕಿಸಿ ಧೋನಿಗೆ ಖುಷಿಯ ವಿಚಾರ ತಿಳಿಸಬೇಕಾಯಿತು ಎಂದು ಪತ್ರಕರ್ತ ರಾಜದೀಪ್ ಸರ್ದೇಸಾಯಿ ಬರೆದ ಪುಸ್ತಕವೊಂದರಿಂದ ಬಹಿರಂಗವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ