ನವದೆಹಲಿ: ರಾಜ್ಯಸಭೆ ಸದಸ್ಯರೂ ಆಗಿರುವ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಸಂಸದನಾಗಿ ನಾಲ್ಕು
ವರ್ಷ ಕಳೆದ ಮೇಲೆ ಮೊದಲ ಬಾರಿಗೆ ಮೊನ್ನೆ ಮಾತನಾಡಲು ಉದ್ದೇಶಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ.
ಸಂಸತ್ತಿನಲ್ಲಿ ಭಾರತದಲ್ಲಿ ಕ್ರೀಡೆಯ ಸ್ಥಿತಿ ಗತಿ ಕುರಿತು ಸಚಿನ್ ಮಾತನಾಡಬೇಕಿತ್ತು. ಆದರೆ ಕಾಂಗ್ರೆಸ್ ಸಂಸದರ ಗದ್ದಲದಿಂದಾಗಿ ಸಚಿನ್ ಗೆ ಮಾತನಾಡಲು ಅವಕಾಶ ಸಿಕ್ಕಿರಲಿಲ್ಲ. ಇದೀಗ ಅಲ್ಲಿ ಆಡಬೇಕಿದ್ದ ಮಾತನ್ನು ಸಚಿನ್ ತಮ್ಮ ಫೇಸ್ ಬುಕ್ ಪುಟದಲ್ಲಿ ವಿಡಿಯೋ ಸಂದೇಶದ ಮೂಲಕ ಹಂಚಿಕೊಂಡಿದ್ದಾರೆ.
ಸುದೀರ್ಘ ಭಾಷಣ ಮಾಡಿರುವ ಸಚಿನ್ ನಮ್ಮ ದೇಶ ಕ್ರೀಡಾ ಪ್ರೇಮಿ ದೇಶವಾಗಬೇಕಿದೆ ಎಂದಿದ್ದಾರೆ. ಅದಕ್ಕಾಗಿ ನಮ್ಮ ಕನಸುಗಳ ಬೆನ್ನತ್ತಿ ಅದರಂತೆ ನಡೆಯಬೇಕಿದೆ ಎಂದಿದ್ದಾರೆ. ಅಷ್ಟೇ ಅಲ್ಲದೆ, ನಮ್ಮ ದೇಶದ ಕ್ರೀಡೆಯ ಸ್ಥಿತಿ ಗತಿಗಳ ಬಗ್ಗೆ ಅಂಕಿ ಅಂಶ ಸಮೇತ ವಿವರಿಸಿದ್ದಾರೆ. ದುರಾದೃಷ್ಟವೆಂದರೆ ಸಚಿನ್ ಹೇಳಬೇಕಿದ್ದ ವಿಚಾರಗಳು ಸಂಸತ್ತಿನಲ್ಲಿ ಹೇಳಲು ಅವರಿಗೆ ಅವಕಾಶವೇ ಸಿಗಲಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ