Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಭಾರತ ರತ್ನ ಬಿರುದಿಗೆ ತಕ್ಕಂತೆ ನಡೆದುಕೊಂಡ ಸಚಿನ್ ತೆಂಡುಲ್ಕರ್!

ಭಾರತ ರತ್ನ ಬಿರುದಿಗೆ ತಕ್ಕಂತೆ ನಡೆದುಕೊಂಡ ಸಚಿನ್ ತೆಂಡುಲ್ಕರ್!
Mumbai , ಬುಧವಾರ, 15 ಫೆಬ್ರವರಿ 2017 (09:21 IST)
ಮುಂಬೈ: ಸಚಿನ್ ತೆಂಡುಲ್ಕರ್ ಮಾಡುವ ಕೆಲವೊಂದು ಸಾಮಾಜಿಕ ಕಳಕಳಿಯ ಕೆಲಸಗಳು ಗೊತ್ತೇ ಆಗಲ್ಲ. ಆದರೆ ಅವರು ಮಾಡುವ ಕೆಲಸಗಳು ಅಷ್ಟು ಅಚ್ಚುಕಟ್ಟಾಗಿ ಮತ್ತು ಸಮಾಜಕ್ಕೆ ಒಳಿತಾಗುವಂತಿರುತ್ತದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.

 
ಅಂತಹದ್ದೇನು ಮಾಡಿದರು ಅವರು? ನಿಮಗೆ ಗೊತ್ತಿರಬಹುದು. ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆಯಾದ ಆದರ್ಶ ಸಂಸದ ಗ್ರಾಮ ಯೋಜನೆ ಜಾರಿಗೆ ತಂದಾಗ ಮೊದಲು ಅದನ್ನು ಕೈಗೆತ್ತಿಕೊಂಡಿದ್ದೇ ಸಚಿನ್ ತೆಂಡುಲ್ಕರ್. ರಾಜ್ಯ ಸಭಾ ಸದಸ್ಯರೂ ಆಗಿರುವ ಸಚಿನ್ ಸಂಸತ್ತು ಕಲಾಪದಲ್ಲಿ ಭಾಗವಹಿಸಿರದಿದ್ದರೂ, ಆಂಧ್ರ ಪ್ರದೇಶದ ಒಂದು ಕುಗ್ರಾಮವನ್ನು ದತ್ತು ಪಡೆದು ಸುಸಜ್ಜಿತ ಗ್ರಾಮವಾಗಿ  ಮೆಚ್ಚುಗೆಗೆ ಪಾತ್ರವಾಗಿದ್ದರು.

ಇದೀಗ ಮತ್ತೊಂದು ಕುಗ್ರಾಮವನ್ನು ಅಭಿವೃದ್ಧಿ ಮಾಡಲು ತೆಂಡುಲ್ಕರ್ ಗ್ರಾಮ ದತ್ತು ಪಡೆದಿದ್ದಾರೆ. ಮಹಾರಾಷ್ಟ್ರದ ಡೊಂಗಾ ಗ್ರಾಮವನ್ನು ದತ್ತು ಪಡೆದು ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ. ಇದಕ್ಕಾಗಿ ಸಂಸದರ ನಿಧಿಯಿಂದ 4 ಕೋಟಿ ರೂ. ವೆಚ್ಚ ಮಾಡಲಿದ್ದಾರೆ. ಇಲ್ಲಿಗೆ ಅಗತ್ಯವಾದ ಮೂಲ ಭೂತ ಸೌಕರ್ಯಗಳನ್ನೆಲ್ಲಾ ಒದಗಿಸಲಿದ್ದಾರೆ. ಈಗ ಹೇಳಿ. ಅವರಿಗೆ ಭಾರತ ರತ್ನ ಕೊಟ್ಟಿದ್ದಕ್ಕೂ ಸಾರ್ಥಕವಾಯಿತಲ್ಲವೇ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ          

Share this Story:

Follow Webdunia kannada

ಮುಂದಿನ ಸುದ್ದಿ

ನಾನು ಇನ್ನೂ ಸಿಂಗಲ್ ಎಂದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ