ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ರೀವಾ ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮವಿತ್ತಿದ್ದರು. ಇದೀಗ ತಮ್ಮ ಮುದ್ದಾದ ಮಗುವಿಗೆ ಚೆಂದದ್ದೊಂದು ಹೆಸರಿಟ್ಟಿದ್ದಾರೆ ಜಡೇಜಾ.
ಸದ್ಯಕ್ಕೆ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗಾಗಿ ಇಂಗ್ಲೆಂಡ್ ನಲ್ಲಿರುವ ಜಡೇಜಾ ತಮ್ಮ ಮಗುವಿನ ಹೆಸರನ್ನು ಟ್ವಿಟರ್ ನಲ್ಲಿ ಘೋಷಿಸಿದ್ದಾರೆ. ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಪಂದ್ಯವಾಡುತ್ತಿದ್ದಾಗ ಜಡೇಜಾ ಪತ್ನಿ ಹೆಣ್ಣು ಮಗುವನ್ನು ಹಡೆದಿದ್ದರು.
ಜಡೇಜಾ ಮತ್ತು ಪತ್ನಿ ತಮ್ಮ ಮಗುವಿಗೆ ‘ನಿಧ್ಯಾನಾ’ ಎಂದು ಹೆಸರಿಟ್ಟಿದ್ದಾರಂತೆ. ಹಾಗಂತ ಅವರು ಟ್ವಿಟರ್ ನಲ್ಲಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಮಹತ್ವದ ಟೂರ್ನಿಗಾಗಿ ಗರ್ಭಿಣಿ ಪತ್ನಿಯನ್ನು ಬಿಟ್ಟು ತೆರಳಲೇಬೇಕು ಎಂದು ಅವರು ಇಂಗ್ಲೆಂಡ್ ವಿಮಾನ ಏರುವ ಮೊದಲು ಸುದ್ದಿಗಾರರೊಂದಿಗೆ ತಮ್ಮ ನೋವು ತೋಡಿಕೊಂಡಿದ್ದರು.