ಚೆನ್ನೈ: ಮುಂದಿನ ದಿನಗಳಲ್ಲಿ ಎಲ್ಲವೂ ಒಳ್ಳೆಯದಾಗಲಿದೆ ಎಂದು ಟೀಂ ಇಂಡಿಯಾದ ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ. ಅವರು ಹೇಳಿದ್ದು ಯಾವ ಅರ್ಥದಲ್ಲಿ? ವಿರಾಟ್ ಕೊಹ್ಲಿ ನಾಯಕನಾಗಿದ್ದಕ್ಕೇ? ಇಲ್ಲಾ, ಬಿಸಿಸಿಐನಲ್ಲಿ ಬದಲಾವಣೆಯಾಗುತ್ತಿರುವುದಕ್ಕಾ?
ಇದ್ಯಾವುದಕ್ಕೂ ಅಲ್ಲ. ಅಷ್ಟಕ್ಕೂ ಅಚ್ಚೇ ದಿನ್ ಬಂದಿದ್ದು ಅವರ ವೈಯಕ್ತಿಕ ಜೀವನದಲ್ಲಿ. ವಿಶ್ವ ನಂ.1 ಬೌಲರ್, ಆಲ್ ರೌಂಡರ್, ವರ್ಷದ ಕ್ರಿಕೆಟಿಗ ಎಲ್ಲವೂ ಬಂತು. ಇತ್ತೀಚೆಗಷ್ಟೇ ಎರಡನೇ ಮಗಳೂ ಹುಟ್ಟದಳು. ಅದಕ್ಕೆ ಹಾಗೆ ಹೇಳಿದರಾ? ಖಂಡಿತಾ ಇಲ್ಲ. ಇಷ್ಟೆಲ್ಲಾ ಖ್ಯಾತಿ ಬಂದಿದ್ದಕ್ಕೆ ಅವರ ಹಿಂದೆ 15 ಕಂಪನಿಗಳು ರಾಯಭಾರಿಯಾಗಲು ಒಪ್ಪಂದಕ್ಕೆ ಸಹಿ ಮಾಡಿಸಿಕೊಳ್ಳಲು ಸಾಲಾಗಿ ನಿಂತಿವೆ.
ಈ ಸಂದರ್ಭದಲ್ಲಿ ಪತ್ರಕರ್ತರೊಬ್ಬರು ಈ ವರ್ಷ ನಿಮ್ಮ ವೃತ್ತಿ ಜೀವನದ ಅತ್ಯುತ್ತಮ ವರ್ಷವೇ ಎಂದು ಕೇಳಿದ್ದಕ್ಕೆ, “ಇದುವೇ ನನ್ನ ಬೆಸ್ಟ್ ಅಲ್ಲ. ಇದಕ್ಕಿಂತ ಒಳ್ಳೆಯ ದಿನಗಳು ನನ್ನ ಜೀವನದಲ್ಲಿ ಬರಲಿವೆ” ಎಂದರು. ಅಂದ ಹಾಗೆ ಅಶ್ವಿನ್ ಈಗ ಕಂಪನಿಗಳ ಮೆಚ್ಚಿನ ತಾರೆಯಾಗಿದ್ದು, ತಾ ಮುಂದು ತಾ ಮುಂದು ಎಲ್ಲರೂ ಅವರನ್ನು ರಾಯಭಾರಿಯಾಗಿ ಮಾಡಿಕೊಳ್ಳಲು ಕ್ಯೂ ನಿಂತಿವೆ. ನಮ್ಮ ದೇಶದ ಕ್ರಿಕೆಟಿಗರ ಪೈಕಿ ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಅತೀ ಹೆಚ್ಚು ಸಂಸ್ಥೆಗಳಿಗೆ ಪ್ರಚಾರ ರಾಯಭಾರಿಗಳಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ