ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ದಿನದಾಟದಲ್ಲಿ ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಆಕ್ರಮಣಕ್ಕೆ ಆಸ್ಟ್ರೇಲಿಯಾ ಆರಂಭಿಕ ಆಘಾತ ಅನುಭವಿಸಿದೆ.
ನಿನ್ನೆ9 ವಿಕೆಟ್ ನಷ್ಟಕ್ಕೆ 250 ರನ್ ಗಳಿಗೆ ದಿನದಾಟ ಮುಗಿಸಿದ್ದ ಭಾರತ ಇಂದು ಒಂದೂ ರನ್ ಸೇರಿಸದೇ ಆಲೌಟ್ ಆಯಿತು. ಬಳಿಕ ತನ್ನ ಸರದಿ ಆರಂಭಿಸಿದ ಅತಿಥೇಯ ತಂಡಕ್ಕೆ ವೇಗಿ ಇಶಾಂತ್ ಶರ್ಮಾ ಆರಂಭದಲ್ಲೇ ಆಘಾತವಿಕ್ಕಿದರು. ಮೊತ್ತ ಶೂನ್ಯವಾಗಿದ್ದಾಗಲೇ ಅಪಾಯಕಾರಿ ಏರನ್ ಪಿಂಚ್ ವಿಕೆಟ್ ಕಿತ್ತರು.
ಬಳಿಕ ರವಿಚಂದ್ರನ್ ಅಶ್ವಿನ್ ಸತತ ಎರಡು ವಿಕೆಟ್ ಕಿತ್ತರು. ಆದರೆ ಇದಾದ ಬಳಿಕ ಉಸ್ಮಾನ್ ಖವಾಜ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿ ತಂಡಕ್ಕೆ ಚೇತರಿಕೆ ನೀಡಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಮತ್ತೆ ಅಶ್ವಿನ್ ಖವಾಜ ವಿಕೆಟ್ ಕಿತ್ತು ಭಾರತಕ್ಕೆ ಬ್ರೇಕ್ ನೀಡಿದರು. ಸದ್ಯಕ್ಕೆ ಆಸೀಸ್ ಸ್ಕೋರ್ 4 ವಿಕೆಟ್ ನಷ್ಟಕ್ಕೆ 87 ರನ್ ಆಗಿದೆ. ಭಾರತದ ಮೊದಲ ಇನಿಂಗ್ಸ್ ಮೊತ್ತ ದಾಟಲು ಆಸೀಸ್ ಇನ್ನೂ 163 ರನ್ ಗಳಿಸಬೇಕಿದೆ. ಒಂದು ವೇಳೆ ಬೌಲರ್ ಗಳು ಇದೇ ಪ್ರದರ್ಶನ ಮುಂದುವರಿಸಿದರೆ ಭಾರತಕ್ಕೆ ಮೊದಲ ಇನಿಂಗ್ಸ್ ಮುನ್ನಡೆ ಸಿಕ್ಕಿದರೂ ಅಚ್ಚರಿಯಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ