ನವದೆಹಲಿ: ರವಿಚಂದ್ರನ್ ಅಶ್ವಿನ್ ಗೆ ಈ ವರ್ಷ ಸುಗ್ಗಿ ಕಾಲ. ಟೆಸ್ಟ್ ಕ್ರಿಕೆಟ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಲ್ ರೌಂಡರ್ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಐಸಿಸಿ ಅವರಿಗೆ ಸೂಕ್ತ ಗೌರವವನ್ನೇ ನೀಡಿದೆ.
2016 ನೇ ಸಾಲಿನ ಅತ್ಯುತ್ತಮ ಕ್ರಿಕೆಟರ್ ಎಂದು ಸನ್ಮಾನ ಮಾಡಿದೆ. ಇದಕ್ಕಾಗಿ ಗ್ಯಾರಿ ಸೋಬರ್ಸ್ ಕ್ರಿಕೆಟರ್ ಆಫ್ ದಿ ಇಯರ್ ಪ್ರಶಸ್ತಿ ಲಭಿಸಿದೆ. ಈ ಪ್ರತಿಷ್ಠಿತ ಪ್ರಶಸ್ತಿ ಪಡೆದ ಮೂರನೇ ಭಾರತೀಯ ಆಟಗಾರ ಮತ್ತು ವಿಶ್ವದ 12 ನೇ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಇದಕ್ಕೂ ಮೊದಲು ರಾಹುಲ್ ದ್ರಾವಿಡ್ 2004 ರಲ್ಲಿ ಮತ್ತು ಸಚಿನ್ ತೆಂಡುಲ್ಕರ್ 2014 ರಲ್ಲಿ ವರ್ಷದ ಕ್ರಿಕೆಟಿಗ ಪ್ರಶಸ್ತಿ ಗೆದ್ದಿದ್ದರು. ಈ ದಿಗ್ಗಜರ ನಂತರ ಮೂರನೆಯವರಾಗಿ ಅಶ್ವಿನ್ ಈ ಪ್ರಶಸ್ತಿ ಗೆದ್ದಿದ್ದಾರೆ ಎನ್ನುವುದೇ ಭಾರತೀಯರಿಗೆ ಗೌರವದ ಸಂಗತಿ. 2015 ರ ಸೆಪ್ಟೆಂಬರ್ ನಿಂದ 2016 ರ ಸೆಪ್ಟೆಂಬರ್ ವರೆಗೆ ಅಶ್ವಿನ್ ಎಂಟು ಟೆಸ್ಟ್ ಪಂದ್ಯಗಳಾಡಿ 48 ವಿಕೆಟ್ ಮತ್ತು 336 ರನ್ ಗಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ