ಚೆನ್ನೈ: ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಅವಕಾಶ ಸಿಕ್ಕಾಗಲೆಲ್ಲಾ ತಮ್ಮ ತವರು ರಾಜ್ಯದ ವಿದ್ಯಮಾನಗಳ ಬಗ್ಗೆ ಟ್ವೀಟ್ ಮಾಡುತ್ತಲೇ ಇರುತ್ತಾರೆ. ಆದರೆ ಇಂದು ಅವರು ಮಾಡಿದ ಟ್ವೀಟ್ ವಿವಾದಕ್ಕೀಡಾಗುವ ಸೂಚನೆ ಸಿಕ್ಕ ಕೂಡಲೇ ಅದಕ್ಕೆ ಸಮಜಾಯಿಷಿ ಕೊಡುವ ಪ್ರಯತ್ನ ನಡೆಸಿದ್ದಾರೆ.
“ತಮಿಳುನಾಡಿನ ಎಲ್ಲಾ ಯುವ ಜನತೆಗಾಗಿ 234 ಉದ್ಯೊಗಾವಕಾಶ ಸದ್ಯದಲ್ಲೇ ತೆರೆದುಕೊಳ್ಳಲಿದೆ” ಎಂದು ಅಶ್ವಿನ್ ಸಂದೇಶ ಬರೆದಿದ್ದರು. ಈ ಮೂಲಕ ಬುದ್ಧಿವಂತಿಕೆಯಿಂದ ಅಧಿಕಾರ ಹಿಡಿದ ಶಶಿಕಲಾಗೆ ಟಾಂಗ್ ಕೊಟ್ಟಿದ್ದರು.
ತಮಿಳುನಾಡಿನಲ್ಲಿ ಒಟ್ಟು 235 ವಿಧಾನಸಭಾ ಸ್ಥಾನಗಳಿವೆ. ಇದರಲ್ಲಿ ಒಂದು ಸ್ಥಾನಕ್ಕೆ ಶಶಿಕಲಾ ಮುಂದಿನ ಆರು ತಿಂಗಳೊಳಗಾಗಿ ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಲೇ ಬೇಕು. ಹೀಗಾಗಿ ಉಳಿದ 234 ಸ್ಥಾನಗಳನ್ನು ಉದ್ದೇಶಿಸಿ ಅಶ್ವಿನ್ ಈ ರೀತಿ ಟಾಂಗ್ ಕೊಟ್ಟಿದ್ದಾರೆ ಎನ್ನಲಾಗಿತ್ತು. ಇದಕ್ಕೆ ಸ್ಪಷ್ಟೀಕರಣ ನೀಡಿದ ಅಶ್ವಿನ್ ತಾನು ತಮಿಳುನಾಡು ಸರ್ಕಾರವನ್ನು ಉದ್ದೇಶಿಸಿ ಹೀಗೆ ಹೇಳಿಲ್ಲ. ತಾನು ಸದ್ಯದಲ್ಲೇ ಆರಂಭವಾಗಲಿರುವ ಉದ್ಯೋಗ ಯೋಜನೆ ಬಗ್ಗೆ ಹೇಳಿದ್ದೆ ಎಂದು ಸಮಜಾಯಿಷಿ ಕೊಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ