Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಿರಾಟ್ ಫ್ಲಾಪ್ ಶೋ: ಶಾಸ್ತ್ರಿ ಅಸಮಾಧಾನ

ವಿರಾಟ್ ಫ್ಲಾಪ್ ಶೋ: ಶಾಸ್ತ್ರಿ ಅಸಮಾಧಾನ
ಕೋಲ್ಕತಾ , ಶನಿವಾರ, 1 ಅಕ್ಟೋಬರ್ 2016 (17:06 IST)
ಈಡನ್ ಗಾರ್ಡನ್‌ನಲ್ಲಿ ನಡೆಯುತ್ತಿರುವ ಕಿವೀಸ್ ವಿರುದ್ಧದ ಐತಿಹಾಸಿಕ 250ನೇ ಟೆಸ್ಟ್‌ನ ಪ್ರಥಮ ಇನ್ನಿಂಗ್ಸ್‌ನಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕಳಪೆ ಆಟಕ್ಕೆ ಮಾಜಿ ಆಟಗಾರ , ಭಾರತ ಕ್ರಿಕೆಟ್ ತಂಡದ ಮಾಜಿ ನಿರ್ದೇಶಕ ರವಿ ಶಾಸ್ತ್ರಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. 
ಕಿವೀಸ್ ವಿರುದ್ಧದ ಎರಡನೆಯ ಟೆಸ್ಟ್‌ನ ಪ್ರಥಮ ಇನ್ನಿಂಗ್ಸ್‌ನ ಪ್ರಥಮ ದಿನದ ಊಟದ ವಿರಾಮದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಅವರು, ಕಳೆದ ಕೆಲ ಇನ್ನಿಂಗ್ಸ್‌ಗಳಲ್ಲಿ ಅವರು ಆಯ್ಕೆ ಮಾಡಿಕೊಳ್ಳುತ್ತಿರುವ ಶಾಟ್‌ಗಳು ನಿರಾಶೆಯನ್ನುಂಟು ಮಾಡುತ್ತಿವೆ. ಬಾರಿಸಬಾರದ ಹೊಡೆತಗಳಿಗೆ ಅವರು ಕೈ ಹಾಕಿದರು . ಕಳಪೆ ಹೊತೆಗಳನ್ನು ಬಾರಿಸಿದರು. ಇದೇ ಕೊಹ್ಲಿ ವಿಫಲವಾಗಲು ಕಾರಣ. ಇದನ್ನು ಅವರು ಮರುಕಳಿಸಬಾರದು ಎಂದು ಅವರು ಹೇಳಿದ್ದಾರೆ. 
 
ಫಾರ್ಮ್‌ನಲ್ಲಿಲ್ಲದಿದ್ದರೆ ಶೀಘ್ರವಾಗಿ ಅದರಿಂದ ಹೊರ ಬರುವ ಪ್ರಯತ್ನ ಮಾಡಬೇಕು. ಬೌಂಡರಿಗಳನ್ನು ಬಾರಿಸುವುದರ ಮೂಲಕ ಆತ್ಮವಿಶ್ವಾಸವನ್ನು ಮರಳಿ ಪಡೆಯಲು ಯತ್ನಿಸಬೇಕು. ಬ್ಯಾಟ್ ಹಿಡಿದ ಕೂಡಲೇ ಆದಷ್ಟು ಬೇಗ ಬೌಂಡರಿಗಳಿಗೆ ಕೈ ಹಾಕಬೇಕು ಎಂದು ಶಾಸ್ತ್ರಿ ಸಲಹೆ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಅಗ್ರ ಸ್ಥಾನಕ್ಕೇರುತ್ತಾ ಕೊಹ್ಲಿ ಪಡೆ?