ಮುಂಬೈ: ಟೀಂ ಇಂಡಿಯಾ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಭವಿಷ್ಯವೇನೋ ಇದೀಗ ಗಂಗೂಲಿ, ಲಕ್ಷ್ಮಣ್ ಮತ್ತು ಸಚಿನ್ ನೇತೃತ್ವದ ಸಲಹಾ ಸಮಿತಿ ಕೈಯಲ್ಲಿದೆ. ಇದೀಗ ದ್ರಾವಿಡ್ ಭವಿಷ್ಯವನ್ನೂ ಇವರೇ ನಿರ್ಧರಿಸಲಿದ್ದಾರೆ!
ಸದ್ಯಕ್ಕೆ ಭಾರತ ಎ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಗುತ್ತಿಗೆ ಅವಧಿ ಮುಗಿಯುತ್ತಿದ್ದು, ಹೊಸ ಕೋಚ್ ಗಳಿಗಾಗಿ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಕುಂಬ್ಳೆಯಂತೇ ದ್ರಾವಿಡ್ ಕೂಡಾ ಎರಡನೇ ಅವಧಿಗೆ ನೇರ ಪ್ರವೇಶ ಪಡೆಯಲಿದ್ದಾರೆ.
ಇವರನ್ನೇ ಉಳಿಸಬೇಕೋ ಅಥವಾ ಹೊಸ ಕೋಚ್ ನೇಮಕ ಮಾಡಬೇಕೋ ಎಂಬುದನ್ನು ಸಲಹಾ ಸಮಿತಿ ನಿರ್ಧರಿಸಲಿದೆ. ಹೀಗಾಗಿ ದ್ರಾವಿಡ್ ಭವಿಷ್ಯವೂ ಸಲಹಾ ಸಮಿತಿ ಕೈಯಲ್ಲಿದೆ ಎನ್ನಲಾಗಿದೆ.
ಈ ನಡುವೆ ಕುಂಬ್ಳೆ ಮತ್ತು ಕೊಹ್ಲಿಯನ್ನು ಭೇಟಿಯಾಗಿ ಸಲಹಾ ಸಮಿತಿ ಸದಸ್ಯರು ಚರ್ಚಿಸಿದ್ದಾರೆ ಎನ್ನಲಾಗಿದೆ. ಚಾಂಪಿಯನ್ಸ್ ಟ್ರೋಫಿ ಫೈನಲ್ ಗೂ ಮೊದಲೇ ಈ ಮಹತ್ವದ ಸಭೆ ನಡೆದಿದೆ ಎನ್ನಲಾಗದೆ.