ಮುಂಬೈ: ಭಾರತ ಎ ತಂಡದ ಕೋಚ್ ಆಗಿ ರಾಹುಲ್ ದ್ರಾವಿಡ್ ಟೀಂ ಇಂಡಿಯಾಕ್ಕೆ ಉತ್ತಮ ಆಟಗಾರರನ್ನೇ ತಯಾರು ಮಾಡುತ್ತಿದ್ದಾರೆ.
ಇದಕ್ಕೆ ಕಾರಣ ಕೋಚ್ ರಾಹುಲ್ ದ್ರಾವಿಡ್ ರ ಕೋಚಿಂಗ್ ಸ್ಟೈಲ್. ಅವರು ತಮ್ಮ ಹುಡುಗರ ಮೇಲೆ ಫಲಿತಾಂಶದ ಬಗ್ಗೆ ಒತ್ತಡ ಹೇರಲ್ಲ. ಬದಲಾಗಿ ಆಟಗಾರರ ಆಟದ ಶೈಲಿ ಸುಧಾರಣೆ, ಒಬ್ಬ ಪರಿಪೂರ್ಣ ಆಟಗಾರನಾಗಿ ಬೆಳೆಯುವುದಕ್ಕೆ ಪೂರಕ ವಾತಾವರಣ ಒದಗಿಸುವುದರ ಬಗ್ಗೆ ಯೋಚನೆ ಮಾಡುತ್ತಾರೆ.
ಇದೀಗಷ್ಟೇ ಇಂಗ್ಲೆಂಡ್, ಶ್ರೀಲಂಕಾ ಸರಣಿ ಮುಗಿಸಿ ಬಂದಿರುವ ತಮ್ಮ ತಂಡದ ಬಗ್ಗೆ ಮಾತನಾಡಿರುವ ದ್ರಾವಿಡ್ ನಮಗೆ ಫಲಿತಾಂಶ ಮುಖ್ಯವಲ್ಲ. ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವುದಷ್ಟೇ ಉದ್ದೇಶವಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಆಟಗಾರರ ಸರ್ವಾಂಗೀಣ ಅಭಿವೃದ್ಧಿ ಬಗ್ಗೆ ಹೆಚ್ಚು ಗಮನಕೊಡುತ್ತಿದ್ದೇವೆ. ರಾಷ್ಟ್ರೀಯ ತಂಡಕ್ಕೆ ಸೂಕ್ತವಾಗುವಂತಹ ಒಬ್ಬ ಅತ್ಯುತ್ತಮ ಆಟಗಾರನಾಗಿ ರೂಪುಗೊಳಿಸುವುದು ನಮ್ಮ ಎ ತಂಡದ ಉದ್ದೇಶ ಎಂದು ದ್ರಾವಿಡ್ ಹೇಳಿದ್ದಾರೆ. ದ್ರಾವಿಡ್ ರ ಈ ಮನೋಭಾವದಿಂದಾಗಿಯೇ ಈವತ್ತು ಟೀಂ ಇಂಡಿಯಾಗೆ ಉತ್ತಮ ಯುವ ಆಟಗಾರರ ಆಗಮನವಾಗುತ್ತಿದೆ ಎಂದರೆ ತಪ್ಪಲ್ಲ!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.