ಬೆಂಗಳೂರು: ಟೀಂ ಇಂಡಿಯಾ ಯುವ ಕ್ರಿಕೆಟಿಗರ ಯಶಸ್ಸಿನ ಹಿಂದೆ ಅಂದು ಎ ತಂಡದ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಕಾರಣ ಎಂದು ಹೊಗಳುತ್ತಿದ್ದಾರೆ. ಆದರೆ ದ್ರಾವಿಡ್ ಮಾತ್ರ ಆ ಕ್ರೆಡಿಟ್ ಪಡೆಯಲು ಹಿಂದೇಟು ಹಾಕಿದ್ದಾರೆ.
ಸಣ್ಣ ಸಹಾಯ ಮಾಡಿದರೂ ಅದನ್ನು ಹೇಳಿಕೊಂಡು ತಿರುಗಾಡುವ ವ್ಯಕ್ತಿಗಳಿರುವಾಗ ದ್ರಾವಿಡ್ ಮಾತ್ರ ಭಾರತ ತಂಡಕ್ಕೆ ಪ್ರತಿಭಾವಂತರ ಗುಂಪನ್ನೇ ತಯಾರು ಮಾಡಿಕೊಟ್ಟರೂ ಆ ಯಶಸ್ಸಿನ ಕ್ರೆಡಿಟ್ ತನ್ನದಲ್ಲ, ಯುವ ಕ್ರಿಕೆಟಿಗರೇ ಸಲ್ಲಬೇಕು ಎನ್ನುವ ಮೂಲಕ ತಮ್ಮ ಔದಾರ್ಯತೆ ಪ್ರದರ್ಶಿಸಿದ್ದಾರೆ.