ಮುಂಬೈ: ಟೀಂ ಇಂಡಿಯಾ ಕೋಚ್ ಆಗಿ ಆಯ್ಕೆಯಾದವರು ಕೋಟಿ ಕೋಟಿ ವೇತನ ಜೇಬಿಗಿಳಿಸುತ್ತಾರೆ ಗೊತ್ತು. ಆದರೆ ರವಿಶಾಸ್ತ್ರಿ ಸಂಭಾವನೆ ಎಷ್ಟು? ಇದು ಇನ್ನೂ ಬಹಿರಂಗವಾಗಿಲ್ಲ.
ಯಾಕೆಂದರೆ ರವಿ ಶಾಸ್ತ್ರಿ ಸಂಬಳವೇ ನಿಗದಿಯಾಗಿಲ್ಲ. ಅದನ್ನು ನಿಗದಿ ಮಾಡುವುದಕ್ಕೆಂದೇ ಸುಪ್ರೀಂ ಕೋರ್ಟ್ ನಿಯಮಿತ ಆಡಳಿತ ಮಂಡಳಿ ನಾಲ್ವರು ಸದಸ್ಯರ ಸಮಿತಿ ರಚಿಸಿದೆ!
ಈ ಸಮಿತಿ ರವಿ ಶಾಸ್ತ್ರಿ ವೇತನ ನಿಗದಿಪಡಿಸಲಿದೆ. ಇಷ್ಟೆಲ್ಲಾ ಸರ್ಕಸ್ ಯಾಕೆಂದರೆ, ಬಿಸಿಸಿಐ ಮೇಲೆ ಸುಪ್ರೀಂ ಕೋರ್ಟ್ ಲೋಧಾ ಸಮಿತಿಯ ವರದಿಯಂತೆ ಕೆಲವು ಆರ್ಥಿಕ ನಿರ್ಬಂಧ ವಿಧಿಸಿರುವುದು. ಹಾಗಾಗಿಯೇ ಎಲ್ಲಾ ನೀತಿ ನಿಯಮಾವಳಿಗಳ ಅನುಸಾರವೇ ಟೀಂ ಇಂಡಿಯಾದ ನೂತನ ಕೋಚ್ ಗೆ ಸಂಬಳ ನಿಗದಿಯಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ