ಲಂಡನ್: ಭಾರತದ ವಿರುದ್ಧ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಆಡಲಿರುವ ಪಾಕಿಸ್ತಾನ ತಂಡದ ಸಾಧನೆ ಬಗ್ಗೆ ಎಲ್ಲಾ ಕಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಆದರೆ ಅವರದ್ದೇ ದೇಶದ ಮಾಜಿ ಆಟಗಾರ ಮಾತ್ರ ತಂಡದ ಮೇಲೆ ಪರೋಕ್ಷವಾಗಿ ಮ್ಯಾಚ್ ಫಿಕ್ಸಿಂಗ್ ಆರೋಪ ಹೊರಿಸಿದ್ದರು. ಆದರೆ ಈಗ ಉಲ್ಟಾ ಹೊಡೆದಿದ್ದಾರೆ.
‘ಸರ್ಫರಾಜ್ ಅಹ್ಮದ್ ಮತ್ತು ಬಳಗ ಏನೋ ದೊಡ್ಡ ಸಾಧನೆ ಮಾಡಿದ್ದೇವೆಂದು ಬೀಗುವುದು ಬೇಡ. ಈ ಗೆಲುವಿನ ಹಿಂದೆ ಯಾವ ಶಕ್ತಿ ಕೆಲಸ ಮಾಡಿದೆ ಎಂದು ನನಗೆ ಗೊತ್ತು. ಇದರಲ್ಲಿ ನಿಮ್ಮ ಸಾಧನೆ ಏನೂ ಇಲ್ಲ. ಗೆಲುವಿನ ಹಿಂದೆ ಕಾಣದ ಕೈವಾಡವಿದೆ’ ಎಂದು ಪಾಕ್ ಮಾಜಿ ಆಟಗಾರ ಅಮೀರ್ ಸೊಹೇಲ್ ಹೇಳಿದ್ದಾರೆ.
ಆ ಮೂಲಕ ಪರೋಕ್ಷವಾಗಿ ತಂಡದ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದ್ದಾರೆ. ಆದರೆ ತಮ್ಮ ಹೇಳಿಕೆ ಭಾರೀ ವಿವಾದವೆಬ್ಬಿಸುತ್ತಿದ್ದಂತೆ ಉಲ್ಟಾ ಹೊಡೆದಿದ್ದಾರೆ. ತಾನು ಮ್ಯಾಚ್ ಫಿಕ್ಸಿಂಗ್ ಮನಸ್ಸಲ್ಲಿಟ್ಟುಕೊಂಡು ಈ ಹೇಳಿಕೆ ನೀಡಿಯೇ ಇಲ್ಲ ಎಂದಿದ್ದಾರೆ.