ನವದೆಹಲಿ: ಟೀಂ ಇಂಡಿಯಾ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ ನ ಆರಂಭಿಕ ಬ್ಯಾಟ್ಸ್ ಮನ್ ಆಗಿ ನೀಡಿದ ಪ್ರದರ್ಶನದ ಬಗ್ಗೆ ನ್ಯೂಜಿಲೆಂಡ್ ಕ್ರಿಕೆಟಿಗ ನೀಶಾಮ್ ನೀಡಿದ ಪ್ರತಿಕ್ರಿಯೆಯೊಂದು ಈಗ ವೈರಲ್ ಆಗಿದೆ.
ಟ್ವಿಟರ್ ನಲ್ಲಿ ಅಭಿಮಾನಿಗಳೊಂದಿಗೆ ಪ್ರಶ್ನೋತ್ತರ ಸೆಷನ್ ಮಾಡಿದ ನೀಶಾಮ್ ಗೆ ಭಾರತೀಯ ಮೂಲದ ಅಭಿಮಾನಿಯೊಬ್ಬ ರೋಹಿತ್ ಶರ್ಮಾರ ಟೆಸ್ಟ್ ಆರಂಭಿಕತ್ವದ ಇನಿಂಗ್ಸ್ ಬಗ್ಗೆ ಪ್ರಶ್ನೆ ಕೇಳಿದ್ದಾನೆ. ರೋಹಿತ್ ಆರಂಭಿಕರಾಗಿ ಹೇಗೆ ಅನಿಸಿತು ಎಂದು ಅಭಿಮಾನಿಯೊಬ್ಬ ಪ್ರಶ್ನಿಸಿದ್ದಾನೆ.
ಇದಕ್ಕೆ ಪ್ರತಿಕ್ರಿಯಿಸಿರುವ ನೀಶಾಮ್ ‘ನನ್ನ ಪ್ರಕಾರ ಅವರ ಆರಂಭ ಪರವಾಗಿಲ್ಲ ಎನಿಸಿತು’ ಎಂದಿದ್ದಾರೆ. ನೀಶಾಮ್ ಈ ರೀತಿ ಉತ್ತರಿಸಿದ್ದು ಭಾರತೀಯರಿಗೆ ಇಷ್ಟವಾಗಿಲ್ಲ. ನೀಶಾಮ್ ಉತ್ತರಕ್ಕೆ ಹಲವು ಭಾರತೀಯ ಅಭಿಮಾನಿಗಳು ಟಾಂಗ್ ಕೊಟ್ಟಿದ್ದಾರೆ.