Select Your Language

Notifications

webdunia
webdunia
webdunia
webdunia

ಇಂದು ಭಾರೀ ಅಂತರದಿಂದ ಗೆದ್ದರೆಯಷ್ಟೇ ಲಖನೌ ಪ್ಲೇ ಆಫ್ ಹಾದಿ ಸುಗಮ

Indian Premier League

Sampriya

ಮುಂಬೈ , ಶುಕ್ರವಾರ, 17 ಮೇ 2024 (19:42 IST)
Photo Courtesy X
ಮುಂಬೈ: ಇಂದು ನಡೆಯುತ್ತಿರುವ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿದೆ.

ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಆಯ್ಕೆ ಮಾಡಿ, ಲಖನೌ ತಂಡವನ್ನು ಫೀಲ್ಡಿಂಗ್‌ಗೆ ಆಹ್ವಾನಿಸಿತು.

ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿರುವ  ಮೊದಲ ತಂಡ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಎನಿಸಿಕೊಂಡಿದೆ. ಮುಂಬೈ ತಂಡವು ಸದ್ಯ 13 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿದ್ದು, 9 ಪಂದ್ಯಗಳನ್ನು ಸೋತು ಕೇವಲ 8 ಅಂಕ ಸಂಪಾದಿಸಿದೆ.

ಲಖನೌ ತಂಡ 13ಪಂದ್ಯಗಳಲ್ಲಿ 12 ಅಂಕ ಸಂಪಾದಿಸಿ ಫ್ಲೇ ಆಫ್ ರೇಸ್‌ ಅನ್ನು ಇನ್ನು ಜೀವಂತವಾಗಿರಿಸಿದೆ. ಈ ಪಂದ್ಯವನ್ನು ಭಾರೀ ಅಂತರದಿಂದ ಗೆದ್ದರೆ ಮಾತ್ರ ಪ್ಲೇ ಆಫ್ ಹಾದಿಯ ಕನಸನ್ನು ಜೀವಂತವಾಗಿರಿಸಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ಮೇ 18 ವಿರಾಟ್ ಕೊಹ್ಲಿಗೂ ಲಕ್ಕಿ ದಿನ, ಇಲ್ಲಿದೆ ಡೀಟೈಲ್ಸ್