ಮುಂಬೈ: ಕಳೆದ ಆರು ತಿಂಗಳಿನಿಂದ ಕೊಹ್ಲಿ ಮತ್ತು ಕುಂಬ್ಳೆ ನಡುವೆ ಮಾತುಕತೆಯೇ ಇರಲಿಲ್ಲ ಎಂದು ಬಿಸಿಸಿಐ ಮೂಲಗಳು ಸ್ಪಷ್ಟಪಡಿಸಿವೆ.
ಲಂಡನ್ ನಲ್ಲಿ ಹೋಟೆಲ್ ನಲ್ಲಿ ಇಬ್ಬರ ನಡುವೆ ಸಂಧಾನ ನಡೆಸಲು ಬಿಸಿಸಿಐ ಪ್ರಯತ್ನಸಿತ್ತು. ಇಬ್ಬರನ್ನೂ ಪ್ರತ್ಯೇಕವಾಗಿ ಕರೆಸಿಕೊಂಡು ವಿಚಾರಿಸಿಕೊಂಡ ಮೇಲೆ ಜತೆಯಾಗಿ ಕೂರಿಸಿ ಕ್ರಿಕೆಟ್ ಸಲಹಾ ಸಮಿತಿ ಪ್ರಯತ್ನಿಸಿತ್ತು.
ಈ ಸಂದರ್ಭದಲ್ಲಿ ಇಬ್ಬರೂ ಪರಸ್ಪರ ಸಂವಹನ ನಡೆಸಲಿಲ್ಲ. ಕುಂಬ್ಳೆ ಬಳಿ ಸಮಸ್ಯೆಯೇನೆಂದು ಕೇಳಿದಾಗ ನನಗೆ ವಿರಾಟ್ ಜತೆ ಯಾವುದೇ ಸಮಸ್ಯೆ ಇಲ್ಲ ಎಂದಿದ್ದರು. ಆದರೆ ವಿರಾಟ್ ಕೋಚ್ ಕುಂಬ್ಳೆ ನಾಯಕನಾದ ನನ್ನ ಅಧಿಕಾರ ವ್ಯಾಪ್ತಿಗೆ ಬರುತ್ತಾರೆ ಎಂದು ದೂರಿದ್ದರು.
ಆದರೆ ಇದಕ್ಕೆ ಉತ್ತರಿಸಿದ್ದ ಕುಂಬ್ಳೆ ಒಬ್ಬ ನಾಯಕನಾಗಿಯೂ ಅನುಭವದ ಆಧಾರದ ಮೇಲೆ ಕೆಲವು ನಿರ್ಧಾರ ಕೈಗೊಂಡಿರಬಹುದು. ಆದರೆ ಅಂತಿಮ ನಿರ್ಧಾರ ಏನಿದ್ದರೂ ನಾಯಕನದ್ದಾಗಿತ್ತು ಎಂದಿದ್ದರು. ಅಲ್ಲದೆ ಕೊನೆಗೆ ಇಬ್ಬರೂ ಇದು ಸರಿಪಡಿಸಲಾಗದ ಹಂತಕ್ಕೆ ಹೋಗಿದೆ ಎಂದು ಮನಗಂಡರು. ಹಾಗಾಗಿಯೇ ಕುಂಬ್ಳೆ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದರು.
ಅಸಲಿಗೆ ವೆಸ್ಟ್ ಇಂಡೀಸ್ ಪ್ರವಾಸ ಬೆಳೆಸಲು ಕುಂಬ್ಳೆ ಹಾಗೂ ಅವರ ಪತ್ನಿಗೂ ಟಿಕೆಟ್ ಬುಕ್ ಆಗಿತ್ತು. ಆದರೆ ಇದೆಲ್ಲಾ ರಗಳೆಗಳಿಂದಾಗಿ ಕುಂಬ್ಳೆ ಹಿಂದೆ ಸರಿದರು ಎಂದು ಬಿಸಿಸಿಐ ಮೂಲಗಳು ಮಾಧ್ಯಮವೊಂದಕ್ಕೆ ಹೇಳಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ