ಮುಂಬೈ: ಕರ್ನಾಟಕ ಮೂಲದ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಐಪಿಎಲ್ ಆಡುವ ಕ್ರಿಕೆಟಿಗ ಕರುಣ್ ನಾಯರ್ ಗೆ ಕೊರೋನಾ ಇತ್ತು ಎಂಬ ಸುದ್ದಿ ಬಗ್ಗೆ ಪಂಜಾಬ್ ತಂಡದ ಸಿಇಒ ಪ್ರತಿಕ್ರಿಯೆ ನೀಡಿದ್ದಾರೆ.
ಕರುಣ್ ಗೆ ಕೊರೋನಾ ತಗುಲಿತ್ತು. ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನೂ ಮೂರು ಬಾರಿ ಪರೀಕ್ಷೆ ನಡೆಸಿ ನೆಗೆಟಿವ್ ವರದಿ ಬಂದರಷ್ಟೇ ಯುಎಇಗೆ ತೆರಳಲಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ಆದರೆ ಈ ಬಗ್ಗೆ ಇದೀಗ ಪಂಜಾಬ್ ತಂಡದ ಸಿಇಒ ಸತೀಶ್ ಮೆನನ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಇದೆಲ್ಲಾ ಸುಳ್ಳು ಸುದ್ದಿ. ಕರಣ್ ಗೆ ಕೊರೋನಾ ಆಗಿರಲಿಲ್ಲ. ಅವರು ಈಗಾಗಲೇ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.