Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

‘ಸಾವಿನ ಬಾಗಿಲು ಬಡಿದವನಿಗೆ ತ್ರಿಶತಕದ ಒತ್ತಡ ಲೆಕ್ಕವೇ ಆಗಿರಲಿಲ್ಲ’

‘ಸಾವಿನ ಬಾಗಿಲು ಬಡಿದವನಿಗೆ ತ್ರಿಶತಕದ ಒತ್ತಡ ಲೆಕ್ಕವೇ ಆಗಿರಲಿಲ್ಲ’
Chennai , ಸೋಮವಾರ, 19 ಡಿಸೆಂಬರ್ 2016 (18:57 IST)
ಚೆನ್ನೈ: ಈ ವರ್ಷಾರಂಭದಲ್ಲಿ ಕೇರಳದ ಪಂಪಾ ನದಿಯಲ್ಲಿ ದೋಣಿ ದುರಂತವೊಂದು ನಡೆದಿತ್ತು. ಅದರಲ್ಲಿ ಕೆಲವು ಮಂದಿ ಸಾವನ್ನಪ್ಪಿದ್ದರು. ಇನ್ನು ಕೆಲವರು ಅದೃಷ್ಟವಶಾತ್ ಬದುಕುಳಿದಿದ್ದರು. ಹಾಗೆ ಸಾವಿನ ಬಾಗಿಲವರೆಗೇ ಹೋಗಿ ಬದುಕುಳಿದು ಬಂದವರಲ್ಲಿ ಕರುಣ್ ನಾಯರ್ ಕೂಡಾ ಒಬ್ಬರು.

ಈವತ್ತು ತ್ರಿಶತಕದ ಹೊಸ್ತಿಲಲ್ಲಿದ್ದಾಗಲೂ ಅವರಿಗೆ ಅದೇ ಅನುಭವವಾಯಿತಂತೆ. ಸಾವಿನಂಚಿಗೆ ಸಿಲುಕಿದ್ದಾಗ ಎಷ್ಟು ಒತ್ತಡದಲ್ಲಿದ್ದೆನೋ ಅದೇ ಒತ್ತಡ ಇಂದು ತ್ರಿಶತಕ ಗಳಿಸುವಾಗಲೂ ಇತ್ತು.  ಆದರೂ ಸಾವಿನ ಬಾಗಿಲು ತಟ್ಟಿದವನಿಗೆ ತ್ರಿಶತಕದ ಒತ್ತಡ ಲೆಕ್ಕವೇ ಆಗಿರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ಆವತ್ತು ಈಜು ಬರದ ಕರುಣ್ ರನ್ನು ಯಾರೋ ಕೈ ಹಿಡಿದು ಮೇಲೆತ್ತಿ ಬದುಕಿಸಿದ್ದರು. ಇಂದೂ ಹಾಗೇ. ತ್ರಿಶತಕ ಗಳಿಸುವ ಹಾದಿಯಲ್ಲಿ ತನ್ನ ಜತೆ ಆಡಿದ ಸಹ ಆಟಗಾರರೆಲ್ಲರೂ ಬೆಂಬಲ ನೀಡಿದರು. ವಿಶೇಷವಾಗಿ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ನನಗೆ ತ್ರಿಶತಕ ಗಳಿಸಲು ತಡವಾಗಿ ಅನುವು ಮಾಡಿಕೊಡುವ ಸಲುವಾಗಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವ ನಿರ್ಧಾರ ಮಾಡಿತು. ಅವರಿಗೆಲ್ಲಾ ನಾನು ಚಿರ ಋಣಿ ಎಂದು ಕರುಣ್ ಭಾವುಕರಾಗಿ ದಿನದಂತ್ಯದ ನಂತರ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತ್ರಿಶತಕ ಗಳಿಸಿದ ಕರುಣ್ ನಾಯರ್ ಗೆ ವೀರೇಂದ್ರ ಸೆಹ್ವಾಗ್ ಹೇಳಿದ್ದೇನು?