ಲಂಡನ್: ನಾಳೆ ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ಕ್ರಿಕೆಟ್ ಕಾಶಿ ಲಾರ್ಡ್ಸ್ ಕ್ರಿಕೆಟ್ ಅಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿದೆ. ಈ ಮೂಲಕ ಕಪಿಲ್ ದೇವ್ ನೇತೃತ್ವದ ಪುರುಷರ ತಂಡದ ನಂತರ ಭಾರತದ ಮಹಿಳೆಯರು ಲಾರ್ಡ್ಸ್ ಅಂಗಣದಲ್ಲಿ ವಿಶ್ವಕಪ್ ಫೈನಲ್ ಆಡಿದ ದಾಖಲೆ ಮಾಡಲಿದ್ದಾರೆ.
ಕಪಿಲ್ ದೇವ್ 1983 ರ ವಿಶ್ವಕಪ್ ಫೈನಲ್ ಪಂದ್ಯವನ್ನು ಇದೇ ಲಾರ್ಡ್ಸ್ ಅಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡಿ ವಿಶ್ವ ಚಾಂಪಿಯನ್ ಆಗಿದ್ದರು. ಇದೀಗ ಮತ್ತೊಮ್ಮೆ ಭಾರತದ ಮಹಿಳೆಯರು ಅದೇ ರೀತಿ ದೈತ್ಯ ಸಂಹಾರಿಗಳಾಗುತ್ತಾರಾ ಕಾದುನೋಡಬೇಕು.
ಭಾರತದ ಮಹಿಳೆಯರು ಇದಕ್ಕೂ ಮೊದಲು 2005 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್ ಫೈನಲ್ ಪಂದ್ಯ ಆಡಿದ್ದರು. ಆಗಿನ ತಂಡಕ್ಕೆ ಹೋಲಿಸಿದರೆ ಈ ಬಾರಿಯ ಮಿಥಾಲಿ ರಾಜ್ ನೇತೃತ್ವದ ತಂಡ ಭಾರೀ ಉತ್ತಮವಾಗಿದೆ. ಅಲ್ಲದೆ, ಸೆಮಿಫೈನಲ್ ನಲ್ಲಿ ಆಡಿದ ಮೇಲಂತೂ ಎಲ್ಲರ ನಿರೀಕ್ಷೆ ಹೆಚ್ಚಾಗಿದೆ. ನಿರೀಕ್ಷೆ ಉಳಿಸಿಕೊಳ್ಳುತ್ತಾ ಎಂದು ನಾಳೆಯವರೆಗೆ ಕಾದು ನೋಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ