ದುಬೈ: ವಿಶ್ವಕಪ್ ಕ್ರಿಕೆಟ್ 2019 ರ ಮೊದಲ ಪಂದ್ಯವಾಡುವ ಮೊದಲು ಟೀಂ ಇಂಡಿಯಾ ಗೌರವಾರ್ಥವಾಗಿ ಐಸಿಸಿ ತನ್ನ ಟ್ವಿಟರ್ ಪೇಜ್ ನಲ್ಲಿ ಕಿಂಗ್ ಕೊಹ್ಲಿ ಎಂಬ ಅಡಿಬರಹದಲ್ಲಿ ಹಾಕಿದ ಫೋಟೋವೊಂದು ಟ್ರೋಲ್ ಗೊಳಗಾಗಿದೆ.
ರಾಜನ ವೇಷದಲ್ಲಿ ಕೊಹ್ಲಿ ಕಿರೀಟ ಧರಿಸಿ, ಕೈಯಲ್ಲಿ ಬ್ಯಾಟ್, ಬಾಲ್ ಹಿಡಿದಿರುವ ಫೋಟೋ ಪ್ರಕಟಿಸಿರುವ ಐಸಿಸಿ ಅದಕ್ಕೆ ‘ಕಿಂಗ್ ಕೊಹ್ಲಿ’ ಎಂದು ಅಡಿಬರಹವನ್ನೂ ಬರೆದಿತ್ತು. ಆದರೆ ಈ ಫೋಟೋ ನೋಡಿದರೆ ಕೆಎಲ್ ರಾಹುಲ್ ಮುಖಚಹರೆಯನ್ನು ಹೋಲುತ್ತದೆ.
ಹೀಗಾಗಿ ಅಭಿಮಾನಿಗಳು ಐಸಿಸಿಯನ್ನು ಟ್ರೋಲ್ ಮಾಡಿದ್ದು ಇದು ಕೊಹ್ಲಿಯಲ್ಲ, ಕೆಎಲ್ ರಾಹುಲ್ ರಂತೆ ಕಾಣುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಅಷ್ಟೇ ಅಲ್ಲ, ಒಂದು ಸ್ವಾಯತ್ತ ಸಂಸ್ಥೆಯಾಗಿರುವ ಐಸಿಸಿ ಒಂದು ದೇಶದ ನಾಯಕನನ್ನು ಈ ರೀತಿ ವೈಭವೀಕರಿಸಿದ್ದಕ್ಕೆ ಕೆಲವರು ಟೀಕಾಪ್ರಹಾರ ನಡೆಸಿದ್ದಾರೆ.