ನಾಗ್ಪುರ: ವಿದರ್ಭ ಮತ್ತು ಸೌರಾಷ್ಟ್ರ ನಡುವೆ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ಪರ ಆಡುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗ ಚೇತೇಶ್ವರ ಪೂಜಾರ ಮೊದಲ ಇನಿಂಗ್ಸ್ ನಲ್ಲಿ ಕೇವಲ 1 ರನ್ ಗಳಿಸಿ ಔಟಾಗಿದ್ದರು.
ಆದರೆ ಪೂಜಾರ ಅಷ್ಟು ಬೇಗನೇ ವಿಕೆಟ್ ಒಪ್ಪಿಸುವವರಲ್ಲ. ಇದು ಆಸ್ಟ್ರೇಲಿಯಾ ಸರಣಿಯಲ್ಲೇ ಪ್ರೂವ್ ಆಗಿತ್ತು. ವಿಕೆಟ್ ಕೊಡದೇ ತಾಳ್ಮೆಯ ಆಟವಾಡುವ ಪೂಜಾರರನ್ನು ಔಟ್ ಮಾಡುವುದು ಸುಲಭವಲ್ಲ ಎಂದು ಆಸ್ಟ್ರೇಲಿಯನ್ನರೇ ಕೈ ಚೆಲ್ಲಿದ್ದರು. ಆದರೆ ವಿದರ್ಭ ಬೌಲರ್ ಗಳು ಸರಿಯಾಗಿ ಯೋಜನೆ ರೂಪಿಸಿ ಮಾಡಿ ತೋರಿಸಿದ್ದಾರೆ.
ಪೂಜಾರ ಪಡೆದ ಸರ್ವಟೆ ಅವರನ್ನು ಔಟ್ ಮಾಡಲು ತಂಡದಲ್ಲಿ ನಡೆದ ಪ್ಲ್ಯಾನ್ ಬಗ್ಗೆ ಬಾಯ್ಬಿಟ್ಟಿದ್ದಾರೆ. ಪಂದ್ಯಕ್ಕೂ ಮೊದಲು ನಾವು ಪೂಜಾರ ಆಸ್ಟ್ರೇಲಿಯಾ ವಿರುದ್ಧ ಆಡಿದ ಇನಿಂಗ್ಸ್ ನ್ನು ಹಲವು ಬಾರಿ ವೀಕ್ಷಿಸಿದ್ದೆವು. ಆಗ ನಮಗೆ ಅವರ ಹುಳುಕಗಳು ಗೊತ್ತಾಯಿತು.
ಪೂಜಾರ ಇನಿಂಗ್ಸ್ ನ ಆರಂಭದಲ್ಲಿ ಮುನ್ನುಗ್ಗಿ ಬಾರಿಸುವುದಿಲ್ಲ. ಕ್ರೀಸ್ ಗೆ ಅಂಟಿಕೊಂಡಿರುತ್ತಾರೆ. ಹೀಗಾಗಿ ಅವರು ಕಾಲಿನ ಚಲನೆಗೆ ಹೆಚ್ಚು ಒತ್ತು ನೀಡುವಂತೆ ಮಾಡುವುದು ನಮ್ಮ ಯೋಜನೆಯಾಗಿತ್ತು. ಹೀಗಾಗಿ ನಾವು ಫಾರ್ವರ್ಡ್ ಶಾರ್ಟ್ ಲೆಗ್ ಫೀಲ್ಡರ್ ನಿಲ್ಲಿಸಿದೆವು. ಬಾಲ್ ಸ್ಪಿನ್ ಆಗುತ್ತಿತ್ತು. ಹೀಗಾಗಿ ಪೂಜಾರ ಮೇಲೆ ಮತ್ತಷ್ಟು ಒತ್ತಡ ಹೇರಲು ಸಿಲ್ಲಿ ಪಾಯಿಂಟ್ ಮತ್ತು ಸ್ಲಿಪ್ ಫೀಲ್ಡರ್ ರನ್ನು ನಿಲ್ಲಿಸಿದೆವು. ಆ ಯೋಜನೆ ಕ್ಲಿಕ್ ಆಯ್ತು. ಪೂಜಾರ ಔಟ್ ಆದರು’ ಎಂದು ಸರ್ವಟೆ ವಿವರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ