ದುಬೈ: ಟೆಸ್ಟ್ ಕ್ರಿಕೆಟ್ ನಲ್ಲಿ ರೋಚಕತೆ ಸೃಷ್ಟಿಸಲು ಐದು ದಿನಗಳಿಗೆ ಕತ್ತರಿ ಹಾಕಿ ನಾಲ್ಕು ದಿನಗಳ ಟೆಸ್ಟ್ ಪಂದ್ಯ ಆಯೋಜಿಸುವ ಐಸಿಸಿ ನಿರ್ಧಾರಕ್ಕೆ ಈಗ ವಿರೋಧ ವ್ಯಕ್ತವಾಗುತ್ತಿದೆ.
ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್ ಮೆಕ್ ಗ್ರಾಥ‍್ ಐಸಿಸಿಯ ಈ ನಿರ್ಧಾರವನ್ನು ವಿರೋಧಿಸಿದ್ದಾರೆ. ಇದು ಟೆಸ್ಟ್ ಪಂದ್ಯದ ಸಂಪ್ರದಾಯವನ್ನು ಹಾಳು ಮಾಡುತ್ತದೆ ಎನ್ನುವುದು ಅವರ ಅಭಿಪ್ರಾಯ.
‘ನಾನು ಸಂಪ್ರದಾಯವಾದಿ. ಟೆಸ್ಟ್ ಐದು ದಿನ ನಡೆದರೆ ಚಂದ. ದಿನ ಕಡಿತ ಮಾಡುವುದನ್ನು ವಿರೋಧಿಸುತ್ತೇನೆ’ ಎಂದು ಮೆಕ್ ಗ್ರಾಥ್ ಹೇಳಿದ್ದಾರೆ. ಇದೇ ರೀತಿ ಆಸೀಸ್ ನ ಇನ್ನೊಬ್ಬ ವೇಗಿ ನಥನ್ ಲಿಯೋನ್ ಕೂಡ ಟೆಸ್ಟ್ ಪಂದ್ಯಗಳ ದಿನ ಕಡಿತ ಮಾಡುವ ಐಡಿಯಾ ಸರಿಯಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.