ನವದೆಹಲಿ: ಒಂದೇ ರಾಜ್ಯದ ಕ್ರಿಕೆಟ್ ಪ್ರತಿಭೆಗಳಾದರೂ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವೆ ಸಂಬಂಧ ಅಷ್ಟಕ್ಕಷ್ಟೇ. ಐಪಿಎಲ್ ಆಡುತ್ತಿದ್ದಾಗ ಹಿಂದೊಮ್ಮೆ ಮೈದಾನದಲ್ಲಿ ಕಿತ್ತಾಡಿಕೊಂಡಿದ್ದ ಈ ಜೋಡಿ ಮೈದಾನದ ಹೊರಗೂ ಆ ಕಹಿಯನ್ನೇ ಮುಂದುವರಿಸುತ್ತಿದ್ದಾರೆ.
ಅದರಲ್ಲೂ ಗಂಭೀರ್ ಅಂತೂ ಅವಕಾಶ ಸಿಕ್ಕಾಗಲೆಲ್ಲಾ ಕೊಹ್ಲಿ ಮೇಲೆ ಟೀಕಾಪ್ರಹಾರ ನಡೆಸುತ್ತಲೇ ಇರುತ್ತಾರೆ. ಇದೀಗ ಮತ್ತೆ ಕೊಹ್ಲಿ ನಾಯಕತ್ವದ ಬಗ್ಗೆ ಟೀಕೆ ಮಾಡಿರುವ ಗಂಭೀರ್ ನಾಯಕನಾಗಿ ಅವರ ಸಾಧನೆ ಏನೇನೂ ಇಲ್ಲ ಎಂದಿದ್ದಾರೆ.
‘ಕೆಲವು ಆಟಗಾರರಿರುತ್ತಾರೆ. ವೈಯಕ್ತಿವಾಗಿ ಸಾಕಷ್ಟು ರನ್ ಗಳಿಸುತ್ತಾರೆ. ಆದರೆ ತಂಡಕ್ಕೆ ಅವರ ಕೊಡುಗೆ ಶೂನ್ಯ. ಬ್ರಿಯಾನ್ ಲಾರಾ ಅವರಂತಹ ಆಟಗಾರರು ಸಾಕಷ್ಟು ರನ್ ಗಳಿಸಿದರು. ಜಾಕಸ್ ಕ್ಯಾಲಿಸ್ ನಂತಹ ಆಟಗಾರರು ಏನನ್ನೂ ಗೆಲ್ಲಲಿಲ್ಲ. ವಿರಾಟ್ ಕೊಹ್ಲಿ ಕೂಡಾ ನಾಯಕನಾಗಿ ಸದ್ಯಕ್ಕೆ ಏನನ್ನೂ ಗೆದ್ದಿಲ್ಲ. ಅವರು ಸಾಧಿಸುವುದು ಇನ್ನೂ ಸಾಕಷ್ಟಿದೆ’ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.