ವಿರಾಟ್ ಕೊಹ್ಲಿ ಮೈದಾನದಲ್ಲಿರುವಾಗ ಪ್ರೇರಣಾದಾಯಕ ನಾಯಕನಂತೆ ಗೋಚರಿಸುತ್ತಾರೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ಗ್ಯಾರಿ ಕರ್ಸ್ಟನ್ ಟೆಸ್ಟ್ ಕಪ್ತಾನ್‌ನ್ನು ಹಾಡಿ ಹೊಗಳಿದ್ದಾರೆ.
ಜೈಪುರಕ್ಕೆ ಆಗಮಿಸಿದ್ದ ಕರ್ಸ್ಟನ್ ಪಿಟಿಐ ಜತೆ ಮಾತನ್ನಾಡುತ್ತ, ವಿರಾಟ್ ಭಾರತ ಕ್ರಿಕೆಟ್ ತಂಡಕ್ಕೆ ಒಬ್ಬ ಮಹಾನ್ ನಾಯಕ. ಅವರ ಪ್ರತಿಭೆ ಪ್ರಶ್ನಾತೀತವಾದುದು. ಆಪ್ ಫೀಲ್ಡ್ ಭರ್ಜರಿ ಪ್ರದರ್ಶನದ ಮೂಲಕ ಅವರು ತಮ್ಮ ಪ್ರತಿಭೆಯನ್ನು ಜಗಜ್ಜಾಹೀರುಗೊಳಿಸಿದ್ದಾರೆ. ಟೆಸ್ಟ್ ವಿಭಾಗದಲ್ಲಿ ಅವರ ನಾಯಕತ್ವ ಅತ್ಯಂತ ಪರಿಣಾಮಕಾರಿ ಎಂಬುದು ಸಾಬೀತಾಗಿದೆ. ಅವರ ಬಗ್ಗೆ ಹೇಳಬೇಕಾದ ಅತ್ಯಂತ ಮಹತ್ವದ ಸಂಗತಿ ಎಂದರೆ ಮೈದಾನದಲ್ಲಿರುವಾಗ ಅವರು ಪ್ರೇರಣಾದಾಯಕ ನಾಯಕನಂತೆ ಗೋಚರಿಸುತ್ತಾರೆ ಎಂದಿದ್ದಾರೆ.
ಆದರೆ ತಾವು ಕೋಚ್ ಆಗಿದ್ದಾಗ ಮೂರು ರೂಪದ ತಂಡಕ್ಕೆ ನಾಯಕರಾಗಿದ್ದ ಧೋನಿ ಮತ್ತು ವಿರಾಟ್ ನಡುವಿನ ನಾಯಕತ್ವದ ಗುಣಗಳನ್ನು ಹೋಲಿಸಲು ದಕ್ಷಿಣ ಆಫ್ರಿಕಾದ ಮಾಜಿ ಆರಂಭಿಕ ಆಟಗಾರ ಕರ್ಸ್ಟನ್ ನಿರಾಕರಿಸಿದರು.
ಧೋನಿ ಅತ್ಯುತ್ತಮ ನಾಯಕ. ಅವರ ಜತೆ ಕೆಲಸ ಮಾಡುವಾಗ ನಾನು ನಿಜಕ್ಕೂ ತುಂಬಾ ಖುಷಿ ಪಟ್ಟಿದ್ದೇನೆ. ಆದರೆ ಮೂರು ರೀತಿಯ ಕ್ರಿಕೆಟ್ ರೂಪದಲ್ಲಿ ಭಾರತ ತಂಡದ ಪ್ರದರ್ಶನವನ್ನು ನಾನು ನಿರಂತರವಾಗಿ ವೀಕ್ಷಿಸಿಲ್ಲವಾದ್ದರಿಂದ ಕೊಹ್ಲಿ ಮತ್ತು ಧೋನಿಯನ್ನು ಹೋಲಿಸಿ ಮಾತನಾಡುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ