ನವದೆಹಲಿ: ಟೀಂ ಇಂಡಿಯಾ ಮಾಜಿ ವೇಗಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಜಹೀರ್ ಖಾನ್ ಕೊನೆಗೂ ತಮ್ಮ ಮದುವೆ ಸುದ್ದಿಯನ್ನು ಖಚಿತಪಡಿಸಿದ್ದಾರೆ.
ಕಳೆದ ಹಲವು ದಿನಗಳಿಂದ ಚಕ್ ದೇ ಇಂಡಿಯಾ ಸಿನಿಮಾದ ಸಾಗರಿಕಾ ಘಾಟೆ ಜತೆ ಓಡಾಡಿಕೊಂಡಿದ್ದರೂ, ತಾವು ಪ್ರೇಮಿಗಳು ಎನ್ನುವುದನ್ನು ಒಪ್ಪಿಕೊಳ್ಳಲು ಇಬ್ಬರೂ ಸಿದ್ಧರಿರಲಿಲ್ಲ. ಆದರೆ ಇದೀಗ ಸ್ವತಃ ಜಹೀರ್ ತಮ್ಮ ಟ್ವಿಟರ್ ಪೇಜ್ ನಲ್ಲಿ ತಾವಿಬ್ಬರೂ ಎಂಗೇಜ್ ಮೆಂಟ್ ಮುಗಿಸಿರುವುದನ್ನು ಫೋಟೋ ಸಮೇತ ಪ್ರಕಟಿಸಿದ್ದಾರೆ.
ಸಾಗರಿಕಾ ಕೈಯಲ್ಲಿ ಉಂಗುರ ತೋರಿಸಿಕೊಂಡು ಜಹೀರ್ ಜತೆ ತೆಗೆಸಿಕೊಂಡಿರುವ ಫೋಟೋ ಒಂದನ್ನು ಸ್ವತಃ ಜಹೀರ್ ಪ್ರಕಟಿಸಿದ್ದಾರೆ. ಅಂತೂ ಗೆಳೆಯರ ಆಸೆಯಂತೆ ಗೃಹಸ್ಥನಾಗಲು ಹೊರಟಿದ್ದಾರೆ ಜಹೀರ್.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ