ಮುಂಬೈ: ಟೀಂ ಇಂಡಿಯಾ ಕಂಡ ಅತ್ಯಂತ ಯಶಸ್ವಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಧೋನಿ. ಆದರೆ ಧೋನಿ ನಂತರ ಟೀಂ ಇಂಡಿಯಾಕ್ಕೆ ಯಾರು ಸೂಕ್ತ ವಿಕೆಟ್ ಕೀಪರ್ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿಕೊಂಡಿದ್ದಾರೆ.
ಇದುವರೆಗೆ ಧೋನಿ ಅನುಪಸ್ಥಿತಿಯಲ್ಲಿ ದಿನೇಶ್ ಕಾರ್ತಿಕ್, ವೃದ್ಧಿಮಾನ್ ಸಹಾ ಸೇರಿದಂತೆ ಹಲವು ವಿಕೆಟ್ ಕೀಪರ್ ಗಳು ಬಂದು ಹೋಗಿದ್ದಾರೆ. ಆದರೆ ಯಾರೂ ಅಷ್ಟೊಂದು ಪ್ರಭಾವ ಬೀರಲಿಲ್ಲ. ಹೀಗಾಗಿ ಧೋನಿ ನಂತರ ಯಾರು ಎಂಬ ಪ್ರಶ್ನೆ ಏಳುತ್ತಿತ್ತು.
ಇನ್ನು ಮುಂದೆ ಆ ಭಯ ಇಲ್ಲ. ಧೋನಿ ಸ್ಥಾನಕ್ಕೆ ರಿಷಬ್ ಪಂತ್ ಸೂಕ್ತ ಎಂಬುದು ಇಂಗ್ಲೆಂಡ್ ಸರಣಿಯಿಂದ ಸ್ಪಷ್ಟವಾಗಿದೆ ಎಂದ ಸೆಹ್ವಾಗ್ ಹೇಳಿಕೊಂಡಿದ್ದಾರೆ. ರಿಷಬ್ ಪಂತ್ ಗಿರುವ ಸಾಮರ್ಥ್ಯ, ಪ್ರತಿಭೆ ನೋಡಿದರೆ ಧೋನಿಗೆ ಪರ್ಫೆಕ್ಟ್ ಮ್ಯಾಚ್ ಎನಿಸುತ್ತದೆ ಎಂದಿರುವ ಸೆಹ್ವಾಗ್ ಹಾಗಿದ್ದರೂ 2019 ರ ವಿಶ್ವಕಪ್ ಕ್ರಿಕೆಟ್ ನಲ್ಲಿ ಧೋನಿಯೇ ತಂಡದಲ್ಲಿರಬೇಕು ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.