ಮುಂಬೈ: ಟೀಂ ಇಂಡಿಯಾ ಕೋಚ್ ಘೋಷಣೆಯಲ್ಲಿ ನಡೆದಷ್ಟು ಹೈಡ್ರಾಮಾ ಬಹುಶಃ ಯಾರ ರಾಜಕೀಯ ನಾಟಕಗಳಿಗೂ ಕಡಿಮೆಯಿಲ್ಲ. ನಿನ್ನೆ ಜಹೀರ್ ಖಾನ್ ಬೌಲಿಂಗ್ ಕೋಚ್ ಎಂದಿದ್ದ ಬಿಸಿಸಿಐ ರಾತ್ರೋ ರಾತ್ರಿ ಅಭಿಮಾನಿಗಳ ಗಮನಕ್ಕೆ.. ಸ್ವಲ್ಪ ಬದಲಾವಣೆ ಇದೆ ಎಂದಿದೆ.
ಅಸಲಿಗೆ ಜಹೀರ್ ಖಾನ್ ಬೌಲಿಂಗ್ ಕೋಚ್ ಆಗುವುದು ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದ ರವಿ ಶಾಸ್ತ್ರಿಗೆ ಬೇಕಿರಲಿಲ್ಲ. ತಮಗೆ ಭರತ್ ಅರುಣ್ ಸಹಾಯಕರಾಗಿ ಕೊಡಿ ಎಂದು ಪಟ್ಟು ಹಿಡಿದಿದ್ದರು. ಹೀಗಾಗಿ ಬಿಸಿಸಿಐ ಜಹೀರ್ ಕೋಚ್ ಗುತ್ತಿಗೆಯನ್ನು ತಡೆ ಹಿಡಿದಿದರು.
ಇದೀಗ ಹೊಸದಾಗಿ ಮಾರ್ಪಾಡುಗಳೊಂದಿಗೆ ಪ್ರಕಟಣೆ ನೀಡಿರುವ ಬಿಸಿಸಿಐ ಜಹೀರ್, ಬ್ಯಾಟಿಂಗ್ ಸಲಹೆಗಾರ ದ್ರಾವಿಡ್ ರಂತೆ ಬೌಲಿಂಗ್ ಸಲಹೆಗಾರನಷ್ಟೇ. ಕೋಚ್ ಅಲ್ಲ ಎಂದು ಸ್ಪಷ್ಟನೆ ನೀಡಿದೆ. ಅಲ್ಲಿಗೆ ರವಿಶಾಸ್ತ್ರಿ ಪಟ್ಟಿಗೆ ಮಣಿದಿದೆ. ಹೀಗಾಗಿ ರವಿಶಾಸ್ತ್ರಿ ಮೆಚ್ಚಿನ ಭರತ್ ಅರುಣ್ ಸದ್ಯದಲ್ಲೇ ತಂಡಕ್ಕೆ ಎಂಟ್ರಿ ಹೊಡೆಯಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ