ಬೆಂಗಳೂರು: ಬೆಂಗಳೂರಿನಲ್ಲಿ ಟಿ20 ಪಂದ್ಯ ಆರಂಭಕ್ಕೆ ಮೊದಲು ಟೀಂ ಇಂಡಿಯಾ ಮತ್ತು ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ ಕೆ ಪ್ರಸಾದ್ ಕ್ಯಾಪ್ಟನ್ ಕೂಲ್ ಧೋನಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಿದ್ದರು. ಇದರ ಹಿಂದೆ ದೊಡ್ಡ ಮರ್ಮವಿತ್ತೇ?
ನಾಯಕತ್ವ ತ್ಯಜಿಸಿರುವ 35 ವರ್ಷ ಧೋನಿ ಸದ್ಯ ಕೇವಲ ಸೀಮಿತ ಓವರ್ ಗಳ ಪಂದ್ಯದಲ್ಲಿ ಆಟಗಾರನಾಗಿ ಮುಂದುವರಿಯುವುದಾಗಿ ಹೇಳಿಕೊಂಡಿದ್ದರು. ಆದರೆ ಮೊನ್ನೆ ಮುಕ್ತಾಯಗೊಂದ ಇಂಗ್ಲೆಂಡ್ ಸರಣಿಯ ನಂತರ ತವರಿನಲ್ಲಿ ಭಾರತಕ್ಕೆ ಸದ್ಯ ಯಾವುದೇ ಸೀಮಿತ ಓವರ್ ಗಳ ಪಂದ್ಯಗಳಿಲ್ಲ.
ಮುಂದೆ ಜೂನ್ ನಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯ ನಡೆದರೂ ಅದು ಇಂಗ್ಲೆಂಡ್ ನಲ್ಲಿ ನಡೆಯಲಿದೆ. ಮುಂದಿನ ವಿಶ್ವಕಪ್ ವರೆಗೆ ಧೋನಿ ಮುಂದುವರಿಯಲು ಬಯಸಿದರೂ, ಇದು ಅವರ ಕೊನೆಯ ಚಾಂಪಿಯನ್ಸ್ ಟ್ರೋಫಿಯಾಗಲಿದೆ.
ರೋಹಿತ್ ಶರ್ಮಾ ಗಾಯದಿಂದ ಚೇತರಿಸಿಕೊಂಡು ಮರಳಿದ ಮೇಲೆ, ಯುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಕ್ಲಿಕ್ ಆದರೆ ಧೋನಿ ಅದಕ್ಕಿಂತ ಮೊದಲೇ ಭಾರತೀಯ ಸಮವಸ್ತ್ರ ಕಳಚಿಡಲಿದ್ದಾರೆಯೇ? ಬಿಸಿಸಿಐ ಪೌರೋಹಿತ್ಯದಲ್ಲಿ ನಡೆದ ಮೊನ್ನೆಯ ಸನ್ಮಾನ ಸಮಾರಂಭ ನೋಡಿದರೆ ಈ ಅನುಮಾನಗಳು ದಟ್ಟವಾಗುತ್ತಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ