ವಿಶಾಖಪಟ್ಟಣ: ಟೀಂ ಇಂಡಿಯಾದಲ್ಲಿ ನಾಯಕ ಯಾರೇ ಆಗಿರಲಿ, ಫೀಲ್ಡಿಂಗ್ ಮಾಡುವಾಗ ಬಾಸ್ ನಾನೇ ಎನ್ನುವುದನ್ನು ಧೋನಿ ನಿನ್ನೆಯ ಪಂದ್ಯದಲ್ಲಿ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ನಿನ್ನೆ ಶ್ರೀಲಂಕಾ ಆರಂಭಿಕರು ಚೆನ್ನಾಗಿ ಆಡುತ್ತಿದ್ದರು. ರನ್ ರೇಟ್ ಸರಾಸರಿ 6 ರ ಮೇಲಿತ್ತು. ಆಗ ಧೋನಿಯ ಸಲಹೆ ಮೇರೆಗೆ ಕುಲದೀಪ್ ಯಾದವ್ ರನ್ನು ಕಣಕ್ಕಿಳಿಸಿದ ರೋಹಿತ್ ಯಶಸ್ಸು ಕಂಡರು. ಇದಕ್ಕೆ ಮೊದಲು ಕುಲದೀಪ್ ಯಾದವ್ ಬೌಲಿಂಗ್ ನಲ್ಲಿ ಎಲ್ ಬಿಡಬ್ಲ್ಯು ಗೆ ಮನವಿ ಸಲ್ಲಿಸಿದಾಗ ಅಂಪಾಯರ್ ಪುರಸ್ಕರಿಸಲಿಲ್ಲ. ಈ ಸಂದರ್ಭದಲ್ಲಿ ರಿವ್ಯೂ ಬೇಡ ಎಂದು ರೋಹಿತ್ ರನ್ನು ತಡೆದರು. ರಿಪ್ಲೇಯಲ್ಲಿ ನೋಡಿದಾಗ ಧೋನಿ ತೀರ್ಮಾನ ಸರಿಯಾಗಿಯೇ ಇತ್ತು.
ಇದರ ನಡುವೆ ಆಗಾಗ ಫೀಲ್ಡಿಂಗ್ ಸೆಟ್ ಮಾಡಲು, ಬೌಲರ್ ಗಳನ್ನು ಬದಲಾಯಿಸಲು ಧೋನಿಯೇ ರೋಹಿತ್ ಗೆ ಮಾರ್ಗದರ್ಶ ನೀಡುತ್ತಿದ್ದುದು ಕಂಡುಬರುತ್ತಿತ್ತು. ಕೊಹ್ಲಿ ನಾಯಕನಾಗಿದ್ದರೂ ಧೋನಿಯೇ ಹೆಚ್ಚು ಫೀಲ್ಡಿಂಗ್ ಸೆಟ್ ಮಾಡುವ ಕೆಲಸ ಮಾಡುತ್ತಿರುತ್ತಾರೆ ಎನ್ನುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ