ಮುಂಬೈ: ಕಟಕ್ ನಲ್ಲಿ ಭಾರತ ದ್ವಿತೀಯ ಏಕದಿನ ಪಂದ್ಯ ಗೆಲ್ಲುವುದರೊಂದಿಗೆ ಇಂಗ್ಲೆಂಡ್ ವಿರುದ್ಧ ಸರಣಿ ಕೈವಶ ಮಾಡಿಕೊಂಡಿತು. ಈ ಸರಣಿ ಗೆಲುವು ವಿರಾಟ್ ಕೊಹ್ಲಿಗೆ ನಾಯಕನಾಗಿ ಮೊದಲ ಏಕದಿನ ಸರಣಿ ಗೆಲುವು. ಇದಕ್ಕಾಗಿ ಮಾಜಿ ನಾಯಕ ಧೋನಿ ಕೊಟ್ಟ ಉಡುಗೊರೆ ಏನೆಂದು ನೀವು ತಿಳಿದುಕೊಳ್ಳಲೇಬೇಕು.
ನಾಯಕರಾಗಿದ್ದಾಗ ಧೋನಿ ಸಾಮಾನ್ಯವಾಗಿ ಯಾವುದೇ ಸರಣಿ ಗೆಲುವಿನ ನಂತರ ನೆನಪಿಗಾಗಿ ಸ್ಟಂಪ್ ಕಿತ್ತುಕೊಂಡು ಹೋಗುತ್ತಿದ್ದರು. ಆದರೆ ಇತ್ತೀಚೆಗೆ ಸ್ಟಂಪ್ ಗೆ ಎಲ್ ಇಡಿ ಬಲ್ಬ್ ಬಳಸುವ ಕಾರಣ, ಆಟಗಾರರು ಸ್ಟಂಪ್ ಕೀಳುವಂತಿಲ್ಲ. ದ್ವಿತೀಯ ಏಕದಿನ ಪಂದ್ಯ ಗೆದ್ದ ಮೇಲೆ ಧೋನಿ ತಾವು ಸ್ಟಂಪ್ ಕೀಳಲಿಲ್ಲ. ಅದರ ಬದಲು ಆ ಪಂದ್ಯದಲ್ಲಿ ಬಳಸಿ ಬಾಲ್ ನ್ನು ಪಡೆದು ಅದರ ಮೇಲೆ ತಮ್ಮ ಸಹಿ ಹಾಕಿ ಕೊಹ್ಲಿಗೆ ಉಡುಗೊರೆಯಾಗಿ ನೀಡಿದರು.
ಉಡುಗೊರೆಯನ್ನು ನಗು ನಗುತ್ತಲೇ ಸ್ವೀಕರಿಸಿದ್ದ ಕೊಹ್ಲಿ ಈ ವಿಷಯವನ್ನು ಕೋಲ್ಕೊತ್ತಾ ಪಂದ್ಯದ ನಂತರ ಬಹಿರಂಗಪಡಿಸಿದ್ದರು. “ಹೌದು. ಎಂಎಸ್ ನನಗೆ ಕಟಕ್ ನಲ್ಲಿ ಬಾಲ್ ಉಡುಗೊರೆಯಾಗಿ ನೀಡಿದರು. ಯಾಕೆಂದರೆ ಈ ದಿನಗಳಲ್ಲಿ ಸ್ಟಂಪ್ ತುಂಬಾ ದುಬಾರಿ. ಹಾಗಾಗಿ ಧೋನಿ ಇದು ನಿನ್ನ ಮೊದಲ ಸರಣಿ ಗೆಲುವು. ಇದು ನಿನಗೆ ವಿಶೇಷ ಎನ್ನುತ್ತಾ ತಮ್ಮ ಸಹಿ ಹಾಕಿದ ಬಾಲ್ ಕೊಟ್ಟರು” ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ