ನವದೆಹಲಿ: ಅನಿಲ್ ಕುಂಬ್ಳೆ ಮತ್ತು ವಿರಾಟ್ ಕೊಹ್ಲಿ ನಡುವೆ ಭಿನ್ನಾಭಿಪ್ರಾಯಗಳ ನಡುವೆ ದಿನಕ್ಕೊಂದು ಸುದ್ದಿ ಬರುತ್ತಿರುವಾಗಲೇ ಮಾಜಿ, ಹಾಲಿ ಕ್ರಿಕೆಟಿಗರು ಕುಂಬ್ಳೆ ಸಹಾಯಕ್ಕೆ ಧಾವಿಸಿದ್ದಾರೆ.
‘ಒಂದು ತಂಡದಲ್ಲಿ ಕೋಚ್ ಮತ್ತು ನಾಯಕನ ನಡುವೆ ಅಭಿಪ್ರಾಯ ಬೇಧವಿರುವುದು ವಿಶೇಷವೇನಲ್ಲ. ಯಾವಾಗಲೂ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿರುತ್ತವೆ. ಕೋಚ್ ಎನಿಸಿಕೊಂಡಿರುವವರು ಸ್ವಲ್ಪ ಹಿಂದಿನ ತಲೆಮಾರಿನವರು’ ಎಂದು ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಅತ್ತ ಕುಂಬ್ಳೆ ಪರ ಬ್ಯಾಟ್ ಮಾಡಿರುವ ಸಹ ಆಟಗಾರ ಹರ್ಭಜನ್ ಸಿಂಗ್ ಕುಂಬ್ಳೆಯಂತಹ ಸ್ಪಿನ್ ದಿಗ್ಗಜನ ಸೇವೆ ಭಾರತ ತಂಡಕ್ಕೆ ಅಗತ್ಯವಿದೆ ಎಂದಿದ್ದಾರೆ. ‘ಅನಿಲ್ ಬಾಯ್ ಸ್ಟ್ರಿಕ್ಟ್ ಕೋಚ್ ಎನ್ನುವುದು ನಿಜವೇ. ಆದರೆ ಆಟದ ಬಗ್ಗೆ ಏನೇ ಸಮಸ್ಯೆಗಳಿದ್ದರೂ, ಅದಕ್ಕೆ ಅವರು ಸ್ಪಂದಿಸುತ್ತಾರೆ. ನಿಮ್ಮ ಕಠಿಣ ಪರಿಶ್ರಮವನ್ನು ಗುರುತಿಸುತ್ತಾರೆ. 15 ವರ್ಷ ಅವರನ್ನು ಹತ್ತಿರದಿಂದ ನೋಡಿದ್ದೆ. ಯಾವತ್ತೂ ಅವರ ಜತೆ ಜಗಳ ಆಡಿಲ್ಲ. ಅಂತಹ ವ್ಯಕ್ತಿಯೂ ಅವರಲ್ಲ’ ಎಂದು ಭಜಿ ಕೊಂಡಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ