ನವದೆಹಲಿ: ಸಾಮಾಜಿಕ ವಿಷಯಗಳ ಬಗ್ಗೆ ಮುಚ್ಚುಮರೆಯಿಲ್ಲದೇ ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ಕ್ರಿಕೆಟಿಗ ಗೌತಮ್ ಗಂಭೀರ್ ದಂಗಲ್ ಖ್ಯಾತಿಯ ನಟಿ ಝೈರಾ ವಾಸಿಂ ವಿವಾದದ ಬಗ್ಗೆ ಟ್ವೀಟ್ ಮಾಡಿದ್ದಾರೆ.
ದಂಗಲ್ ಸಿನಿಮಾದಲ್ಲಿ ಗೀತಾ ಪೋಘಟ್ ಪಾತ್ರ ಮಾಡಿದ್ದ ವಾಸಿಂ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರನ್ನು ಭೇಟಿ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಅವರು ಇಸ್ಲಾಂ ವಿರೋಧಿ ಎನ್ನುವ ಕಾಮೆಂಟ್ ಗಳೂ ಬಂದಿದ್ದವು. ಇದಕ್ಕೆ ವಾಸಿಂ ಫೇಸ್ ಬುಕ್ ಪೇಜ್ ನಲ್ಲಿ ಕ್ಷಮೆ ಯಾಚಿಸಿದ್ದರು.
ನಾನು ಯಾವುದೇ ರೀತಿಯಲ್ಲೂ ರೋಲ್ ಮಾಡೆಲ್ ಅಲ್ಲ. ನಾನು ಇತ್ತೀಚೆಗೆ ಒಬ್ಬರನ್ನು ಭೇಟಿ ಮಾಡಿದ್ದು ಜನರಿಗೆ ಇಷ್ಟವಾಗಿಲ್ಲ. ಇದಕ್ಕೆ ಇದು ನನ್ನ ಕ್ಷಮಾಪಣಾ ಪತ್ರ ಎಂದು ವಾಸಿಂ ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದರು.
ಆದರೆ ವಾಸಿಂ ಪರವಾಗಿ ಬಾಲಿವುಡ್ ನ ಅನೇಕ ಗಣ್ಯರು ನಿಂತಿದ್ದರು. ಇದೀಗ ಕ್ರಿಕೆಟಿಗ ಗೌತಮ್ ಗಂಭೀರ್ ಕೂಡಾ ವಾಸಿಂ ಪರವಾಗಿ ಟ್ವೀಟ್ ಮಾಡಿದ್ದು, ಆಕೆ ಕ್ಷಮೆ ಯಾಚಿಸಬೇಕಾಗಿ ಬಂದಿದ್ದು, ನಾಚಿಕೆಗೇಡಿನ ವಿಷಯ. ಆಕೆ ದಂಗಲ್ ಸಿನಿಮಾದಲ್ಲಿ ನಟಿಸಿದ್ದು, ಇಸ್ಲಾಂ ವಿರೋಧಿ ಮತ್ತು ಮೆಹಬೂಬಾ ಮುಫ್ತಿಯವರನ್ನು ಭೇಟಿ ಮಾಡಿದ್ದು, ಅದಕ್ಕೆ ಕ್ಷಮೆ ಯಾಚಿಸಬೇಕಾಗಿ ಬಂದಿದ್ದು, ನಿಜಕ್ಕೂ ನಾಚಿಕೆಗೇಡಿನ ವಿಷಯ ಎಂದು ಗಂಭೀರ್ ಟೀಕಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ