Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕರ್ಟ್ನಿ ವಾಲ್ಶ್‌; ಬಾಂಗ್ಲಾದೇಶದ ಬೌಲಿಂಗ್ ಕೋಚ್

ಕರ್ಟ್ನಿ ವಾಲ್ಶ್‌; ಬಾಂಗ್ಲಾದೇಶದ  ಬೌಲಿಂಗ್ ಕೋಚ್
ಢಾಕಾ , ಶುಕ್ರವಾರ, 2 ಸೆಪ್ಟಂಬರ್ 2016 (15:55 IST)
ವೆಸ್ಟ್ ಇಂಡೀಸ್ ಕ್ರಿಕೆಟಿಗ ಕರ್ಟ್ನಿ ವಾಲ್ಶ್ (53) ಗುರುವಾರ ಬಾಂಗ್ಲಾದೇಶ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ. 

ವಾಲ್ಶ್‌ ಅವರು 2019ರ ಏಕದಿನ ವಿಶ್ವಕಪ್‌ವರೆಗೂ ಈ ಹುದ್ದೆಯಲ್ಲಿ ಇರಲಿದ್ದಾರೆ. ಜಿಂಬಾಬ್ವೆಯ ಹೀತ್‌ ಸ್ಟ್ರೀಕ್‌ ಅವರು ಹಿಂದಿನ ಎರಡು ವರ್ಷ ಬೌಲಿಂಗ್‌ ಕೋಚ್‌ ಆಗಿ ಕೆಲಸ ಮಾಡಿದ್ದರು.
 
ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಸದಸ್ಯರಾಗಿ ಕಳೆದ ಎರಡು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಅವರ ಒಪ್ಪಂದ ಆಗಸ್ಟ್ ಅಂತ್ಯದಲ್ಲಿ ಕೊನೆಗೊಂಡಿದ್ದು ಈ ತಿಂಗಳಿಂದ ಅವರು ಹೊಸ ಸ್ಥಾನವನ್ನಲಂಕರಿಸಲಿದ್ದಾರೆ.
 
2001ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಬೈಬೈ ಹೇಳಿದ್ದ ಅವರು ಇದೇ ಮೊದಲ ಬಾರಿಗೆ ಕೋಚ್ ಹುದ್ದೆಯನ್ನು ನಿರ್ವಹಿಸಲಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು ಬಿಸಿಬಿ (ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್)ಯಲ್ಲಿ ತಜ್ಞ ಕೋಚ್ ಆಗಿ ಕಾರ್ಯ ನಿರ್ವಹಿಸಲು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ. 
 
ತಮ್ಮ 17 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 519 ಮತ್ತು ಏಕದಿನದಲ್ಲಿ 227 ವಿಕೆಟ್ ಕಿತ್ತಿರುವ ಅವರು 1987ರಲ್ಲಿ ವಿಸ್ಡನ್ ಕ್ರಿಕೆಟರ್ ಆಫ್ ದ್ ಇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 
 
ಅವರ ಅವಧಿ ಈ ವರ್ಷದ ಮೇ ತಿಂಗಳಿನಲ್ಲಿ ಮುಗಿದಿತ್ತು. ಹೀಗಾಗಿ ಅವರ ಜಾಗದಲ್ಲಿ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ (ಬಿಸಿಬಿ) 53 ವರ್ಷದ ವಾಲ್ಶ್‌ ಅವರನ್ನು ನೇಮಕ ಮಾಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ದುಲೀಪ್ ಟ್ರೋಫಿ: ಫೈನಲ್‌ಗೇರಿದ ಇಂಡಿಯಾ ರೆಡ್